ಮೋದಿ ಸಂಪುಟದಲ್ಲಿ ಪ್ರಮಾಣವಚನ ಸ್ವೀಕಾರಿಸುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಹೊಸದಿಲ್ಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ ದಾಖಲೆಯ ಮೂರನೇ ಅವಧಿಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹಲವಾರು ಸಚಿವರೂ ಮೋದಿಯವರೊಂದಿಗೆ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಗೆದ್ದಿದ್ದು,ಬಿಜೆಪಿ ತನ್ನ ಮಿತ್ರಪಕ್ಷಗಳಿಗೆ ಕೆಲವು ಸಚಿವ ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ.
ಇಂದು ಪ್ರಮಾಣ ವಚನ ಸ್ವೀಕರಿಸಬಹುದಾದ ಸಂಭಾವ್ಯ ಸಚಿವರು:
ಅಮಿತ್ ಶಾ – ಬಿಜೆಪಿ
ರಾಜನಾಥ ಸಿಂಗ್ – ಬಿಜೆಪಿ
ನಿತಿನ್ ಗಡ್ಕರಿ – ಬಿಜೆಪಿ
ರಕ್ಷಾ ಖಾಡ್ಸೆ – ಬಿಜೆಪಿ
ಜ್ಯೋತಿರಾದಿತ್ಯ ಸಿಂದಿಯಾ – ಬಿಜೆಪಿ
ಜಿತೇಂದ್ರ ಸಿಂಗ್ – ಬಿಜೆಪಿ
ಅರ್ಜುನ್ ರಾಮ್ ಮೇಘ್ವಾಲ್ – ಬಿಜೆಪಿ
ಕಿರಣ್ ರಿಜಿಜು – ಬಿಜೆಪಿ
ಮನ್ಸುಖ್ ಮಾಂಡವೀಯ – ಬಿಜೆಪಿ
ಅಶ್ವಿನಿ ವೈಷ್ಣವ್ – ಬಿಜೆಪಿ
ಹರ್ದೀಪ ಸಿಂಗ್ ಪುರಿ – ಬಿಜೆಪಿ
ಜಿ.ಕಿಶನ್ ರೆಡ್ಡಿ – ಬಿಜೆಪಿ
ಶಿವರಾಜ ಸಿಂಗ್ ಚೌಹಾಣ್ – ಬಿಜೆಪಿ
ಶಂತನು ಠಾಕೂರ್ – ಬಿಜೆಪಿ
ರಾವ್ ಇಂದ್ರಜಿತ ಸಿಂಗ್ – ಬಿಜೆಪಿ
ಬಂಡಿ ಸಂಜಯ – ಬಿಜೆಪಿ
ಶೋಭಾ ಕರಂದ್ಲಾಜೆ – ಬಿಜೆಪಿ
ಬಿ.ಎಲ್.ವರ್ಮಾ – ಬಿಜೆಪಿ
ರವನೀತ ಸಿಂಗ್ ಬಿಟ್ಟು – ಬಿಜೆಪಿ
ಹರ್ಷ ಮಲ್ಹೋತ್ರಾ – ಬಿಜೆಪಿ
ಸರಬಾನಂದ ಸೋನೊವಾಲ್ – ಬಿಜೆಪಿ
ನಿತ್ಯಾನಂದ ರಾಯ್ – ಬಿಜೆಪಿ
ಧರ್ಮೇಂದ್ರ ಪ್ರಧಾನ – ಬಿಜೆಪಿ
ಅಜಯ ಟಮ್ಟಾ – ಬಿಜೆಪಿ
ನಿರ್ಮಲಾ ಸೀತಾರಾಮನ್ – ಬಿಜೆಪಿ
ಸಾವಿತ್ರಿ ಠಾಕೂರ್ – ಬಿಜೆಪಿ
ಮನೋಹರಲಾಲ್ ಖಟ್ಟರ್ – ಬಿಜೆಪಿ
ರಾಮದಾಸ ಅಠಾವಳೆ – ಆರ್‌ಪಿಐ(ಎ)
ರಾಮಮೋಹನ್ ನಾಯ್ಡು ಕಿಂಜರಾಪು - ಟಿಡಿಪಿ
ಚಂದ್ರಶೇಖರ ಪೆಮ್ಮಸಾನಿ – ಟಿಡಿಪಿ
ಅನುಪ್ರಿಯಾ ಪಟೇಲ್ – ಅಪ್ನಾ ದಳ
ಜಯಂತ್ ಚೌಧರಿ – ರಾಷ್ಟ್ರೀಯ ಲೋಕ ದಳ
ಜಿತನ ರಾಮ್ ಮಾಂಝಿ – ಹಿಂದುಸ್ಥಾನಿ ಆವಾಮ್ ಮೋರ್ಚಾ
ರಾಮನಾಥ ಠಾಕೂರ್ – ಜೆಡಿಯು
ಚಿರಾಗ ಪಾಸ್ವಾನ್ – ಲೋಕ ಜನಶಕ್ತಿ ಪಾರ್ಟಿ (ರಾಮ ವಿಲಾಸ)
ಎಚ್.ಡಿ.ಕುಮಾರಸ್ವಾಮಿ – ಜೆಡಿಎಸ್
ಪ್ರತಾಪರಾವ್ ಜಾಧವ್ – ಶಿವಸೇನೆ
ಭಾರತದ ‘ನೆರೆಕರೆ ಮೊದಲು’ ನಿಲುವಿಗೆ ಅನುಗುಣವಾಗಿ ನೆರೆಹೊರೆ ಮತ್ತು ಹಿಂದು ಮಹಾಸಾಗರ ಪ್ರದೇಶದ ದೇಶಗಳ ಹಲವಾರು ನಾಯಕರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸರಕಾರಿ ಅಧಿಕಾರಿಯೋರ್ವರು ರವಿವಾರ ದೃಢಪಡಿಸಿದರು.
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ,ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು,ಸೇಷೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫಿಫ್,ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾರಿಶಸ್ ಪ್ರಧಾನಿ ಪ್ರವಿಂದ ಕುಮಾರ ಜುಗನೌಥ, ನೇಪಾಳ ಪ್ರಧಾನಿ ಪುಷ್ಪಕಮಲ ದಹಲ್ ‘ಪ್ರಚಂಡ’ ಮತ್ತು ಭೂತಾನ ಪ್ರಧಾನಿ ಶೆರಿಂಗ್ ಟೋಬ್ಗೆ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ನಾಯಕರಲ್ಲಿ ಸೇರಿದ್ದಾರೆ.