ಉಡುಪಿ: ಅಮೇರಿಕ- ಇಸ್ರೇಲ್ ಕೂಟದ ಯುದ್ದಕೋರ ನೀತಿ ವಿರೋಧಿಸಿ ಪ್ರತಿಭಟನೆ
ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಪ್ಯಾಲೆಸ್ಟೈನ್ ಜನತೆಗೆ ಸೌಹಾರ್ದ ಬೆಂಬಲ ಸೂಚಿಸಲು ಮತ್ತು ಅಮೇರಿಕ-ಇಸ್ರೇಲ್ ಕೂಟದ ಯುದ್ದಕೋರ ನೀತಿ ವಿರೋಧಿಸಿ ಸೌಹಾರ್ದ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಇಂದು ಸಂಜೆ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರೋ. ಕೆ.ಫಣಿರಾಜ್ ಅವರು, ಪ್ಯಾಲೆಸ್ಟೈನ್‌ನ ಜನರಿಗೆ ಸೌಹಾರ್ದ ಬೆಂಬಲ ಸೂಚಿಸುವ ಉದ್ದೇಶದಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಇಸ್ರೇಲ್ ಎಂದರೆ ಅನ್ಯಾಯ ದಬ್ಬಾಳಿಕೆ ಮತ್ತು ಅಧಿಕಾರದ ಪ್ರತೀಕ. ಪ್ಯಾಲೆಸ್ಟೈನ್ ಎಂದರೆ ನ್ಯಾಯದ ಪ್ರತೀಕ. ಇದು ಮಾನವ ಜಗತ್ತಿನಲ್ಲಿ ನ್ಯಾಯ ಮತ್ತು ಅನ್ಯಾಯ ಎಂದರೇನು ಎಂಬ 2 ವಿಷಯವನ್ನು ಪದೇ ಪದೇ ನೆನಪಿಸುತ್ತಿರುವ ಸನ್ನಿವೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೆ. ಶಂಕರ್, ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ಟರ್, ವಾಸುದೇವಾ ಮುದ್ದೂರು, ಮುಸ್ಲಿಂ ಒಕ್ಕೂಟ, ಇದ್ರಿಸ್ ಹೂಡೆ, ಕೆಥೋಲಿಕ್ ಸಂಘಟನೆಯ ಸಂತೋಷ ಕರ್ನೆಲಿಯೋ, ಶಿವನಾಂದ್, ಚಂದ್ರಶೇಖರ್, ಕವಿರಾಜ್ ಉಪಸ್ಥಿತರಿದ್ದರು.