ಹೈಕೋರ್ಟ್ ಆದೇಶ- ಉಡುಪಿ ನಗರ ಸಭೆಯಿಂದ ನ್ಯಾಯವಾದಿಯ ಅಕ್ರಮ ಮನೆ ತೆರವು

Oplus_131072

ಉಡುಪಿ, ಜೂ.6: ಉಡುಪಿ ನಗರಸಭೆ ವ್ಯಾಪ್ತಿಯ ಕೊರಂಗ್ರಪಾಡಿ ಚರ್ಚ್ ಬಳಿ ಅಕ್ರಮವಾಗಿ ನಿರ್ಮಿಸಲಾದ ಮನೆಯನ್ನು ಹೈಕೋರ್ಟ್ ಆದೇಶದಂತೆ ಉಡುಪಿ ನಗರಸಭೆಯಿಂದ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು.

2012ರಲ್ಲಿ ಸುಮಾರು ನಾಲ್ಕೂವರೆ ಸೆಂಟ್ಸ್ ಜಾಗದಲ್ಲಿ ವಕೀಲ ಗಿರೀಶ್ ಐತಾಳ್ ಮನೆಯನ್ನು ನಿರ್ಮಿಸಿದ್ದರು. ಸೆಟ್‌ಬ್ಯಾಕ್ ಸೇರಿದಂತೆ ಯಾವುದೇ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ದೂರಿ ಆರ್‌ಟಿಐ ಕಾರ್ಯಕರ್ತ ಗುಂಡಿಬೈಲು ಶ್ರೀಪತಿ ರಾವ್ ಉಡುಪಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗಿರೀಶ್ ಐತಾಳ್ ತಡೆಯಾಜ್ಞೆ ತಂದಿದ್ದರು.

ಈ ಮಧ್ಯೆ 2014ರಲ್ಲಿ ಶ್ರೀಪತಿ ರಾವ್ ಹೈಕೋರ್ಟ್‌ಗೂ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಉಡುಪಿ ಕೋರ್ಟ್‌ನಲ್ಲಿ ವಿಧಿಸ ಲಾದ ತಡೆಯಾಜ್ಞೆ ಕೂಡ ತೆರವಾಯಿತು. ಸುಧೀರ್ಘ ಕಾಲದ ವಿಚಾರಣೆಯ ಬಳಿಕ ಹೈಕೋರ್ಟ್ ಅಕ್ರಮವಾಗಿ ನಿರ್ಮಿಸ ಲಾದ ಗಿರೀಶ್ ಐತಾಳ್ ಅವರ ಮನೆಯನ್ನು ತೆರವು ಗೊಳಿಸುವಂತೆ ಉಡುಪಿ ನಗರಸಭೆಗೆ ಆದೇಶ ನೀಡಿತು.

ಅದರಂತೆ ಇಂದು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಎರಡು ಮಹಡಿಯ ಮನೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಾಳೆ ಕೂಡ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!