ಮಣಿಪಾಲ: ಗಾಂಜಾ ಮಾರಾಟ ಮಾಡುತ್ತಿದ್ದ ಕಾಲೇಜ್ ವಿದ್ಯಾರ್ಥಿಯ ಬಂಧನ

Oplus_131072

ಮಣಿಪಾಲ: ಗಾಂಜಾ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಅಪಾರ್ಟ್‌ಮೆಂಟ್‌‌ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ತಿರುವನಂತಪುರದ ಸಿದ್ದಾರ್ಥ (22) ಎಂಬಾತ ಬಂಧಿತ ವಿದ್ಯಾರ್ಥಿ. ಖಚಿತ ಮಾಹಿತಿಯಂತೆ ಆತ ವಾಸಿಸುತ್ತಿದ್ದ ವಸತಿಗೃಹಕ್ಕೆ ದಾಳಿ ಮಾಡಿದ‌ ಪೊಲೀಸರು ಆತನಿಂದ 20,000 ರೂ ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000 ರೂ ಮೌಲ್ಯದ ಮೊಬೈಲ್‌ ಫೋನ್‌ನನ್ನು ವಶಪಡಿಸಿಕೊಂಡಿರುತ್ತಾರೆ.

ಈತ ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗಾಂಜಾವನ್ನು ಶೇಖರಿಸಿ ಇಟ್ಟಿರುವುದು ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!