ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡ 3,069 ಮತಗಳೊಂದಿಗೆ ಗೆಲುವಿನತ್ತ

ಮೈಸೂರು: ವಿಧಾನಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎರಡನೇ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 3,069 ಮತಗಳಿಂದ ಮುನ್ನಡೆ ಗಳಿಸಿ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ.

ಅವರು 6,645 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಕೆ.ಕೆ. ಮಂಜುನಾಥ್ ಕುಮಾರ್ 3,576 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಹರೀಶ್ ಆಚಾರ್ಯ 1,681 ಮತಗಳನ್ನು ಗಳಿಸಿದ್ದಾರೆ.

ಈವರೆಗೆ 14,000 ಮತಗಳನ್ನು ಎಣಿಕೆ ಮಾಡಲಾಗಿದ್ದು, ಅದರಲ್ಲಿ 560 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

Updated

ನೈರುತ್ಯ ಶಿಕ್ಷಕರ ಚುನಾವಣೆಯಲ್ಲಿ ಜೆಡಿಎಸ್ ನ ಭೋಜೇಗೌಡ ಗೆಲುವು

ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ ಎಸ್.ಎಲ್.ಭೋಜೇಗೌಡ.

ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯ.

5267 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ ಭೋಜೇಗೌಡ

ಒಟ್ಟು ಚಲಾವಣೆ ಆಗಿದ್ದ ಮತ 19,479

ಅಸಿಂಧು ಮತಗಳ ಸಂಖ್ಯೆ 821

18658 ಸಿಂಧು ಮತಗಳು.

ಗೆಲುವಿಗೆ 9,3330 ಖೋಟಾ ಮತ ಎಂದು ನಿಗದಿಯಾಗಿತ್ತು

9829 ಮತಗಳಿಗೆ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದ ಭೋಜೇಗೌಡ

ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4562 ಮತಗಳು‌

Leave a Reply

Your email address will not be published. Required fields are marked *

error: Content is protected !!