ಉಡುಪಿ: ಶಾಲಾ ಬಸ್ ಚಾಲಕನಿಗೆ ಲಘು ಹೃದಯಾಘಾತ- ಆರವತ್ತಕ್ಕೂ ಹೆಚ್ಚು ಮಕ್ಕಳು ಪ್ರಾಣಪಾಯದಿಂದ ಪಾರು
ಉಡುಪಿ, ಜೂ.5(ಉಡುಪಿ ಟೈಮ್ಸ್ ವರದಿ) ಬ್ರಹ್ಮಾವರದಿಂದ ಮಣಿಪಾಲ ಕಡೆ ಬರುತ್ತಿದ್ದ ಶಾಲಾ ಬಸ್ ಚಾಲಕನಿಗೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಸಂಜೆ ಪೆರಂಪಳ್ಳಿಯಲ್ಲಿ ನಡೆದಿದೆ.
ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯ 65 ಮಕ್ಕಳು ಪೆರಂಪಳ್ಳಿಯಾಗಿ ಮಂಚಿಯತ್ತ ಹೋಗುತ್ತಿದ್ದ ಬಸ್‌ನ ಚಾಲಕ ಆಲ್ವಿನ್ ಡಿಸೋಜಾ(52) ಅವರಿಗೆ ಪೆರಂಪಳ್ಳಿಯತ್ತ ಬರುತ್ತಿದ್ದಂತೆ ಲಘು ಹೃದಯಾಘಾತವಾಯಿತು. ತಕ್ಷಣ ಸಮಯ ಪ್ರಜ್ಞೆಯಿಂದ ಚಾಲಕ ಆಲ್ವಿನ್ ಅವರು ಬಸ್‌ನನ್ನು ಸಂಪೂರ್ಣ ಎಡಕ್ಕೆ ತಿರುಗಿಸಿ ನಿಲ್ಲಿಸಿದ್ದರು.
ಬ್ರಹ್ಮಾವರದಿಂದ ಹೊರಟ ಬಸ್‌ನಲ್ಲಿದ್ದ ಐದು ವಿದ್ಯಾರ್ಥಿಗಳು ಇಳಿದಿದ್ದರು. ಬಳಿಕ ಮಣಿಪಾಲದಿಂದ ಮಂಚಿಗೆ ಹೊರಟ ಬಸ್ ಪೆರಂಪಳ್ಳಿ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿದ್ದಾರೆ. ಬಸ್ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.