ಪದವೀಧರರು ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ- ರಘುಪತಿ ಭಟ್

ಉಡುಪಿ: ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನನ್ನು ನಾನು ಮೂರು ಬಾರಿ ಶಾಸಕನಾಗಿ ಜನತೆಗೆ ಸ್ಪಂದಿಸಿದ ರೀತಿ, ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದಲ್ಲಿ ನಡೆಸಿದ ವಿನೂತನ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವಿರುವ ಪದವೀಧರರು ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್‌ ಹೇಳಿದರು.

ನಾನು ರಾಜಕೀಯ ಮಾಡಲು ಅಥವಾ ಯಾರನ್ನೋ ಸೋಲಿಸಲು ಚುನಾವಣೆಗೆ ನಿಂತಿಲ್ಲ. ಜನರ ಸೇವೆಗಾಗಿ ಪರಿಷತ್‌ಗೆ ಆಯ್ಕೆಯನ್ನು ಬಯಸಿದ್ದೇನೆ. 5 ಜಿಲ್ಲೆ ಹಾಗೂ ದಾವಣಗೆರೆಯ ಮೂರು ತಾಲೂಕುಗಳನ್ನು ಒಳಗೊಂಡ ಭೌಗೋಳಿಕವಾಗಿ ಅತಿ ದೊಡ್ಡ ಕ್ಷೇತ್ರವಾಗಿರುವ ಇಲ್ಲಿನ ಜನತೆ ತೋರಿಸಿದ ಪ್ರೀತಿಯಿಂದಾಗಿ ನನ್ನ ಗೆಲುವಿನ ವಿಸ್ವಾಸ ಇಮ್ಮಡಿಗೊಂಡಿದೆ. ನೈಋತ್ಯ ಪದವೀಧರರ ಈ ಕ್ಷೇತ್ರ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹತ್ತು ಹಲವು ವೈವಿಧ್ಯತೆಗಳನ್ನು ಹೊಂದಿದೆ. ಹಲವಾರು ಉದ್ಯಮಗಳನ್ನು ಒಳಗೊಂಡ ಈ ಕ್ಷೇತ್ರದ ಪದವೀಧರರಿಗೆ ಅವರವರ ಶೈಕ್ಷಣಿಕ ಅರ್ಹತೆಗನುಗುಣವಾಗಿ ಉದ್ಯೋಗ ಮತ್ತು ಉದ್ಯಮಕ್ಕೆ ಸಹಕಾರಿಯಾಗಬಲ್ಲ ಸವಲತ್ತುಗಳು ಮತ್ತು ಪೂರಕವಾದ ಸರ್ಕಾರದ ಶಾಸನಗಳು ರೂಪಿತವಾಗಿ ಜಾರಿಯಾಗುವ ಅವಶ್ಯಕತೆಗಳನ್ನು ಮನಗಂಡಿರುತ್ತೇನೆ. ಪದವೀಧರರಿಗೆ ಉದ್ಯೋಗ, ಪದವೀಧರರಿಂದ ಉದ್ಯಮ. ಸಹಾಯ – ಸಹಕಾರ – ಸಂಪರ್ಕ ಎನ್ನುವ ಆಶಯವನ್ನು ಇಟ್ಟುಕೊಂಡು ವಿವಿಧ ಕ್ಷೇತ್ರಗಳ ಪದವೀಧರ ಉದ್ಯೋಗಿಗಳ ಜೊತೆ ಮತ್ತು ಪದವೀಧರರಲ್ಲಿ ಚರ್ಚಿಸಿ ಈ ಕ್ಷೇತ್ರದ ಅವ‍್ಯಕತೆಗಳ ಬಗ್ಗೆ ಮಾಹಿತಿ ಪಡೆದು ಅದನ್ನು ನೆರವೇರಿಸುವ ಸಂಕಲ್ಪದೊಂದಿಗೆ ಮೂರು ಬಾರಿ ಶಾಸಕನಾದ ಸಂದರ್ಭದಲ್ಲಿ ನಾನು ವಿಧಾನ ಸಭೆಯ ಗ್ರಂಥಾಲಯ ಸಮಿತಿ ಅಧ್ಯಕ್ಷನಾಗಿ, 2 ಬಾರಿ ಅಧೀನ ಶಾಸನ ಸಮಿತಿ ಅಧ್ಯಕ್ಷನಾಗಿ, 2 ಬಾರಿ ಭರವಸೆಗಳ ಸಮಿತಿ ಅಧ್ಯಕ್ಷನಾಗಿ ಈಗಾಗಲೇ ಈ ಸಮಿತಿಗಳಿಗೆ ಸಂಬಂಧಿಸಿದ ವರದಿಯನ್ನು ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸಿರುವ ಕಾರ್ಯಾನುಭವದೊಂದಿಗೆ ಪದವೀಧರರ ಕ್ಷೇತ್ರದ ಬೇಡಿಕೆ, ಶಿಕ್ಷಕರ ಮತ್ತು ಸರ್ಕಾರಿ ನೌಕರರ ಬೇಡಿಕೆ ಹಾಗೂ ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪದವೀಧರರ ಎಲ್ಲಾ ಬೇಡಿಕೆಗಳಗೆ ಧ್ವನಿಯಾಗಿ ಪದವೀಧರರ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತೋರಿಸಿ ಕೊಡುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!