ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮುಕ್ತೇಸರರಾಗಿ ಡಾ.ರವಿರಾಜ್
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು.
ನೂತನ ಆಡಳಿತ ಮುಕ್ತೇಸರರಾಗಿ ಮಣಿಪಾಲ ಕೆ.ಎಂ.ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಕಡಿಯಾಳಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ. ರವಿರಾಜ್ ಆಚಾರ್ಯ ಸರ್ವಾನುಮತದಿಂದ ಆಯ್ಕೆಗೊಂಡರು.
ನೂತನ ಸದಸ್ಯರಾಗಿ ನಾಗರಾಜ ಶೆಟ್ಟಿ ಕಡಿಯಾಳಿಕೆ.ಮಂಜುನಾಥ್ ಹೆಬ್ಬಾರ್, ರಮೇಶ್ ಶೇರಿಗಾರ್ ಕುಂಜಿಬೆಟ್ಟು, ಕಿಶೋರ್ ಸಾಲ್ಯಾನ್, ಸಂಧ್ಯಾ ಪ್ರಭು, ಶಶಿಕಲಾ ಭರತ್ಗಣೇಶ ನಾಯ್ಕ ಪಾಡಿಗಾರು ಮತ್ತುಪ್ರಸ್ತುತ ಪಾಳಿಯಲ್ಲಿ ಇರುವ ಅರ್ಚಕರಾದ ಕೆ. ರಘುಪತಿ ಉಪಾಧ್ಯ ಆಯ್ಕೆಗೊಂಡರು. ದೇವಸ್ಥಾನದ ಆಡಳಿತ ಅಧಿಕಾರಿ ರವೀಂದ್ರ ಅಧಿಕಾರ ಹಸ್ತಾಂತರಿಸಿದರು.
ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಶುಭಹಾರೈಸಿದರು ಈ ಸಂದರ್ಭದಲ್ಲಿ ಕುಂಜಿಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಗಿರೀಶ್ ಅಂಚನ್,ಕಡಿಯಾಳಿ ವಾರ್ಡಿನ ನಗರಸಭಾ ಸದಸ್ಯ ಗೀತ ಶೇಟ್, ಧಾರ್ಮಿಕ ಪರಿಷತ್ತು ಉಡುಪಿ ಜಿಲ್ಲಾ ಸದಸ್ಯರಾದ ಮೋಹನ್ ಉಪಾಧ್ಯಯ , ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಮ್ಯಾನೇಜರ್ ಗಂಗಾಧರ ಹೆಗಡೆ ಉಪಸ್ಥಿತರಿದ್ದರು.