‘ಆರಂಭಿಕ ತುಳುನಾಡಲ್ಲಿ ಮರಾಠರು’ ಗ್ರಂಥ ರಚನೆಕಾರ ಚರಡಪ್ಪ ನಾಯ್ಕ್ ಇನ್ನಿಲ್ಲ
ಉಡುಪಿ : ಅಲೆವೂರು ಜಡ್ಡು ನಿವಾಸಿ ಚರಡಪ್ಪ ನಾಯ್ಕ್ (80) ಮಂಗಳವಾರ ನಿಧನರಾದರು.
ಆಹಾರ ಮತ್ತು ಉದ್ಯಮ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚರಡಪ್ಪ ನಾಯ್ಕ್ ಅವರು, ‘ಆರಂಭಿಕ ತುಳುನಾಡಲ್ಲಿ ಮರಾಠರು’ ಎಂಬ ಅಧ್ಯಯನ ಗ್ರಂಥ ರಚಿಸಿ, ಮರಾಠ ಸಂಸ್ಕೃತಿ, ಭಾಷೆ, ಇತಿಹಾಸದ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಪತ್ನಿ ಇದ್ದಾರೆ.