ಉಡುಪಿ: ಸಹಕಾರ ಸಂಘಗಳ ಸಿಇಒಗಳಿಗೆ ಚುನಾವಣಾ ಪೂರ್ವ ತರಬೇತಿ
ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ಬೆಂಗಳೂರು), ಉಡುಪಿ ಜಿಲ್ಲಾ ಸಹಕಾರ ಯೂನಿ ಯನ್, ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿರುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ ಶಿಬಿರ ಶುಕ್ರವಾರ ನಡೆಯಿತು.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸಲಾದ ತರಬೇತಿ ಶಿಬಿರ ವನ್ನು ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕೆ. ಲಾವಣ್ಯ ಉದ್ಘಾಟಿಸಿ ಮಾತನಾಡಿದರು.
2024-25ನೇ ಸಾಲಿನಲ್ಲಿ ಜಿಲ್ಲೆಯ 200 ಸಹಕಾರ ಸಂಘಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ ಸಿಇಒಗಳಿಗೆ ಮಹ ತ್ವದ ಪಾತ್ರವಿದೆ. ಚುನಾವಣೆ ಸೂಕ್ಷ್ಮ ವಿಷಯವಾಗಿದ್ದು ಸಣ್ಣ ಪುಟ್ಟ ಲೋಪಕ್ಕೂ ದಾವೆ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದರು.
ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ. ಮಾತನಾಡಿ, ಚುನಾವಣೆ ನಿಗದಿಯಾದ 195 ದಿನಗಳ ಮೊದಲು ನೋಟೀಸ್, 120 ದಿನಗಳ ಮೊದಲು ಮತದಾರರ ಪಟ್ಟಿ ತಯಾರಿಸ ಬೇಕು.ಮತದಾರರ ಪಟ್ಟಿ ಕೊಡದಿದ್ದರೆ ತಕರಾರು ಎದುರಾದೀತು. ಒತ್ತಡಕ್ಕೆ ಒಳಗಾಗಬೇಡಿ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಿದೆಗೆ ಅನುಗುಣವಾಗಿ ಚುನಾವಣೆ ಪಾರದರ್ಶಕವಾಗಿ ನಡೆಸಬೇಕು. ಎರಡು ಮಹಾಸಭೆಗಳಿಗೆ ಹಾಜರಾಗದಿದ್ದರೆ ಮತದಾನಕ್ಕೆ ಅವಕಾಶವಿಲ್ಲ ಎಂದರು.
ಸಹಕಾರ ಇಲಾಖೆಯ ಸುನಿಲ್, ರೋಹಿತ್, ಜಯಂತಿ, ಜ್ಯೋತಿ, ಪಡುಬಿದ್ರಿ ಸಿಎ ಬ್ಯಾಂಕಿನ ಅಧ್ಯಕ್ಷ ಸುಧೀರ್ ಕುಮಾರ್ ವೈ.ಉಪಸ್ಥಿತರಿದ್ದರು. ಪ್ರಭಾರ ಸಿಇಓ ಅನುಷಾ ಕೋಟ್ಯಾನ್ ನಿರೂಪಿಸಿ, ವಂದಿಸಿದರು.