ಸುನೀಲ್ ಕುಮಾರ್ ರವರೇ ನಿಮಗೆ ಮತ್ತು ಬಿಜೆಪಿಗೆ ಸುಳ್ಳು ಹೇಳಿ ಜನತೆಯ ದಾರಿ ತಪ್ಪಿಸುವ ಪ್ರವೃತ್ತಿಯೇ?- ಕೃಷ್ಣಮೂರ್ತಿ ಆಚಾರ್ಯ
ಉಡುಪಿ: ಶಾಸಕರಾದ ಸುನೀಲ್ ಕುಮಾರ್ ರವರೇ ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ನ ಬಗ್ಗೆ ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸುವ ಮುಂಚೆ ಕಾರ್ಕಳದ ಶಾಸಕರಾದ ತಾವು ತಮ್ಮ ಅಧಿಕಾರವಧಿಯಲ್ಲಿ ತಮ್ಮಸರಕಾರ ಇದ್ದಾಗ ಉಡುಪಿ ಜಿಲ್ಲೆಯಲ್ಲಿ ಹಾಗೂ ತಮ್ಮ ಸ್ವಕ್ಷೇತ್ರವಾದ ಕಾರ್ಕಳದಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳಾದ ಗೋ ಕಳ್ಳತನ, ಕಲ್ಲು ಕೋರೆಗಳಲ್ಲಾದ ಅನೈತಿಕ ಘಟನೆ, ಹೀಗೆ ಹಲವು ರೀತಿಯ ಅಪರಾಧಗಳಿಗೆ ಸಹಕರಿಸಿದ ನೀವು ಯಾವ ನೈತಿಕತೆ ಇಟ್ಟು ಸಿದ್ದರಾಮಯ್ಯರವರನ್ನು ದೂರುತ್ತಿರಿ. ಆದರ ಹಕ್ಕು ಕೂಡ ನಿಮಗಿಲ್ಲ.
ಕಾರ್ಕಳ ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಉಡುಪಿ ಜಿಲ್ಲೆಯ ಜನಸಾಮಾನ್ಯರಿಗೆ ಸುಳ್ಳು ಹೇಳಿಕೆಗಳನ್ನು ನೀಡಿ ಜಿಲ್ಲೆಯ ಜನಸಾಮಾನ್ಯರ ಮನಸ್ಸಿನಲ್ಲಿ ಗೊಂದಲ ಮಯವಾದ ವಾತಾವರಣ ಉಂಟುಮಾಡಿ. ಹಾಗೂ ನಮ್ಮ ಹಿಂದುಗಳ ಭಾವನೆಗಳಿಗೆ ದಕ್ಕೆಯನ್ನು ತಂದಿರುತ್ತೀರಿ. ತಮ್ಮ ಸ್ವಕ್ಷೇತ್ರದಲ್ಲಿ ನಡೆದ ಪರಶುರಾಮ ಥೀಂ ಪಾರ್ಕ್ ನ ಆದ ಅವ್ಯವಹಾರಗಳ ಬಗ್ಗೆ ನಾಡಿನ ಜನತೆ ಮಾತಾನಾಡುತ್ತಿದ್ದಾರೆ. ಈ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಜನತೆಯಲ್ಲಿ ಈ ರೀತಿಯ ಗೊಂದಲಮಯ ಹೇಳಿಕೆಗಳನ್ನು ಹೇಳುತ್ತಿದ್ದೀರಿ. ಈ ಹೇಳಿಕೆಯನ್ನೂ ಖಂಡಿಸುವುದಲ್ಲದೇ ಇಂಥ ಹೇಳಿಕೆಗಳು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮಗೆ ಶೋಭೆ ತರುವುದಿಲ್ಲ ತರುವುದಿಲ್ಲ. ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.