ರಸ್ತೆಯಲ್ಲಿ ನಮಾಝ್ ಪ್ರಕರಣ: ಸುಮೊಟೊ ಕೇಸ್ ವಾಪಸ್: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಕಳೆದ ಶುಕ್ರವಾರ ಮಾಡಿದ್ದಾರೆ ಎನ್ನಲಾದ ನಗರದ ಕಂಕನಾಡಿಯ ಮಸೀದಿ ಬಳಿಕ ರಸ್ತೆಯಲ್ಲಿ ನಮಾಝ್ ಪ್ರಕರಣ ಸಂಬಂಧ ದಾಖಲಾಗಿದ್ದ ಸುಮೊಟೊ ಕೇಸ್ ರದ್ದಾಗಿದೆಯೆಂದು ತಿಳಿದು ಬಂದಿದೆ.
ಅಲ್ಲದೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಮಾಝ್ ಪ್ರಕರಣವನ್ನು ಮುಂದಿಟ್ಟುಕೊಂಡು, ಕಾರ್ಯಾಚರಣೆ ನಡೆಸುತ್ತೇವೆ, ಹನುಮಾನ್ ಚಾಲಿಸಾ ಪಠಿಸುತ್ತೇವೆ ಎಂದು ಬೆದರಿಕೆ ಒಡ್ಡಿ ಶಾಂತಿ ಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.