ಉದ್ಯಾವರ ಧರ್ಮಗುರುಗಳಿಗೆ ಬೀಳ್ಕೊಡುಗೆ

ಉದ್ಯಾವರ: ಸಂತ ಫ್ರಾನ್ಸಿಸ್ ದೇವಾಲಯ , ಉದ್ಯಾವರ ಇಲ್ಲಿ ಕಳೆದ 6 ವರ್ಷಗಳಿಂದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಸಂತ ಅಂತೋನಿಯವರ ದೇವಾಲಯ, ಕುಂತಳನಗರ ಇಲ್ಲಿಗೆ ವರ್ಗಾವಣೆಗೊಂಡ ವಂ. ಸ್ಟ್ಯಾನಿ ಬಿ.ಲೋಬೋ ಅವರನ್ನು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಗೌರವ ಸದಸ್ಯರಾಗಿದ್ದುಕೊಂಡು ಕ್ಲಬ್ ನ ಚಟುವಟಿಕೆಗಳಿಗೆ  ಪ್ರೋತ್ಸಾಹ  ಮತ್ತು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದ ವಂದನೀಯ ಸ್ಟ್ಯಾನಿ ಬಿ. ಲೋಬೋರವರು ತಮಗೆ ಸಲ್ಲಿಸಿದ ಗೌರವಕ್ಕೆ ಧನ್ಯವಾದ ಸಲ್ಲಿಸಿ ಕ್ಲಬ್’ಗೆ ಶುಭ ಹಾರೈಸಿದರು. ಉಡುಪಿ ಶೋಕಮಾತಾ ದೇವಾಲಯಕ್ಕೆ ವರ್ಗಾವಣೆಗೊಳ್ಳಲಿರುವ ಸಹಾಯಕ ಧರ್ಮಗುರುಗಳಾದ ವಂದನೀಯ ಲೀಯೊ ಪ್ರವೀಣ್ ಡಿಸೋಜರವರನ್ನು ಈ ಸಂದರ್ಭದಲ್ಲಿ ಗೌರವಿಸಿ ಬೀಳ್ಕೊಡಲಾಯಿತು.

ಪೆರಂಪಳ್ಳಿ ದೇವಾಲಯದಿಂದ ವರ್ಗಾವಣೆಗಂಡು ನೂತನವಾಗಿ ಪ್ರಧಾನ ಧರ್ಮಗುರುಗಳಾಗಿ ನೇಮಕಗೊಂಡ ವಂದನೀಯ ಅನಿಲ್ ಡಿಸೋಜರನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ನೂತನ ಧರ್ಮಗುರುಗಳು ತಮ್ಮ ಸಹಕಾರ ಹಾಗೂ ಮಾರ್ಗದರ್ಶನ ಸದಾ ಕ್ಲಬ್ ಗೆ ನೀಡುವುದಾಗಿ ಭರವಸೆ ನೀಡಿದರು. ಕ್ಲಬ್ ನ ಅಧ್ಯಕ್ಷರಾದ ಲ.ಪ್ರೇಮ್ ಮಿನೇಜಸ್ ಸ್ವಾಗತಿಸಿದರೆ, ಲ.ಹರೀಶ್ಚಂದ್ರ ಧನ್ಯವಾದವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಸ್ಥಾಪಕ ಅಧ್ಯಕ್ಷರಾದ ಲ. ಹೆನ್ರಿ ಡಿಸೋಜ ಎ.ಜೆ.ಎಫ್, ನಿಕಟಪೂರ್ವ ಅಧ್ಯಕ್ಷರಾದ ಲ.ಅನಿಲ್ ಲೋಬೊ, ನಿಯೋಜಿತ ಅಧ್ಯಕ್ಷರಾದ ಲ.ರೊನಾಲ್ಡ್ ರೆಬೆಲ್ಲೊ, ಕಾರ್ಯದರ್ಶಿ ಲ.ಜೆರಾಲ್ಡ್ ಪಿರೇರ, ಕೋಶಾಧಕಾರಿ ಲ.ಅನಿಲ್ ಮಿನೇಜಸ್, ಸದಸ್ಯರಾದ ಲ.ರೊನಾಲ್ಡ್ ಡಿಸೋಜ, ಲ.ಪ್ರವೀಣ್ ಪಿಂಟೊ ಉಪಸ್ಥಿತರಿದ್ದರು. ಮಾಜಿ ಕಾರ್ಯದರ್ಶಿ ಲ.ಮೈಕಲ್ ಡಿಸೋಜರವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!