ಶಾಸಕ ಹರೀಶ್ ಪೂಂಜರೇ ಗೆಲ್ಲಿಸಿದ ಕ್ಷೇತ್ರದ ಜನರು ಪಶ್ಚಾತ್ತಾಪ ಪಡುವಂತೆ ನಡೆದುಕೊಳ್ಳಬೇಡಿ- ಕಾಂಚನ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಒರ್ವ ಜನಪ್ರತಿನಿಧಿಯಾಗಿ, ಶಾಸಕರಾಗಿ ಪೊಲೀಸ್ ಅಧಿಕಾರಿಗಳ ವಿರುದ್ದ ಅಸಂಸದೀಯ ಪದವನ್ನು ಬಳಸಿರುವುದು ಮತ್ತು ಅದಕ್ಕಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಕ್ಕಾಗಿ ಕಾರಣವಿಲ್ಲದೆ ಹೈಡ್ರಾಮ ನಡೆಸಿರುವುದು ಬಿಜೆಪಿ ಪಕ್ಷದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾ ಸಂಸ್ಕೃತಿ ವಿಚಾರವನ್ನು ಮಾತನಾಡುವ ಬಿಜೆಪಿಯ ಶಾಸಕರು, ಸಂಸದರು ನಿರ್ದಿಷ್ಟ ಪ್ರಕರಣವೊಂದರಲ್ಲಿ ಬೆಳ್ತಂಗಡಿ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿದ್ದನ್ನು ನೆಪವಾಗಿಸಿಕೊಂಡ ಶಾಸಕರು ಠಾಣೆಗೆ ನುಗ್ಗಿ ಪೊಲೀಸರನ್ನು ಏರು ಧ್ವನಿಯಿಂದ ಬೈದು ಅವಾಚ್ಯ ಶಬ್ದದಿಂದ ಅವಹೇಳನಗೈದಿದ್ದಾರೆ. ತಾನೋರ್ವ ಶಾಸಕ ಎಂಬುದನ್ನು ಮರೆತ ಹರೀಶ್ ಪೂಂಜಾ ತನ್ನ ಎಂದಿನ ಚಾಳಿಯನ್ನು ಮುಂದುವರಿಸಿ ನಾಡಿನ ಕಾನೂನನ್ನು ಉಲ್ಲಂಘಿಸಿರುತ್ತಾರೆ. ಇದು ಇವರ ಸಂಸ್ಕೃತಿಯೇ?

ಒರ್ವ ಶಾಸಕರಾದವರು ಸಮಾಜಕ್ಕೆ ಮಾದರಿಯಾಗಿರ ಬೇಕು ಹೊರತು ಬೇಲಿಯೇ ಎದ್ದು ಹೊಲ ಮೇಯುವ ಕೆಲಸ ಮಾಡುವುದು ಅಲ್ಲದೆ ಸಂಸ್ಕೃತಿ ಹೀನರಾಗಿ ವರ್ತನೆ ತೋರಿಸದ್ದಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಇರುವವರು. ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕಾಲರ್ ಹಿಡಿಯುತ್ತೇನೆ ಎಂದು ಹೇಳುವುದು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರು ಪಶ್ಚಾತ್ತಾಪ ಪಡುವಂತೆ ನಡೆದುಕೊಳ್ಳಬೇಡಿ.

ಬಿಜೆಪಿ ಸರ್ಕಾರದ ಇದ್ದ ಸಂದರ್ಭದಲ್ಲಿ ಇದೇ ರೀತಿ ಸರ್ಕಾರಿ ಅಧಿಕಾರಿಗಳಿಗೆ, ಪೊಲೀಸರಿಗೆ ದರ್ಪ ಮತ್ತು ಅಹಂಕಾರದಿಂದ ನಡೆದುಕೊಂಡ ನಿಮಗೆ ಈಗ ಸರ್ಕಾರ ಬದಲಾವಣೆಯಾಗಿದೆ ಎಂದು ತಿಳಿದಿರಲಿ.

ಅಧಿಕಾರ ಯಾವತ್ತೂ ಶಾಶ್ವತವಲ್ಲ. ಜನಸೇವೆ ಮಾಡಲು ಕ್ಷೇತ್ರದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಇಂದು ನಿಮ್ಮನ್ನು ಗೆಲ್ಲಿಸಿದ ಜನರು ನಾಳಿನ ದಿನ ನಿಮ್ಮ ವಿರುದ್ಧವೇ ತಿರುಗಿಬೀಳಬಹುದು. ಶಾಸಕರಾದವರಿಗೆ, ಸಾಮಾನ್ಯರಿಗೆ ಈ ನೆಲದ ಕಾನೂನು ಒಂದೇ ಎನ್ನುವ ಕನಿಷ್ಠ ಜ್ಞಾನ ಇರದೇ ಇರುವುದು ನಾಚಿಕೇಗೇಡು. ಕಳೆದ ಬಾರಿ ಕೂಡ ಶಾಸಕ ಹರೀಶ್ ಪೂಂಜಾ ಅವರು ಇಂತಹ ವರ್ತನೆ ತೋರಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದು ಮತ್ತೆ ಇದೇ ವರ್ತನೆ ಪುನರಾವರ್ತನೆ ತೋರಿಸಿದ್ದು ಅವರ ಕೆಟ್ಟ ವರ್ತನೆಗೆ ಪೊಲೀಸ್ ಕ್ರಮ ಅಗತ್ಯವಾಗಿದ್ದು ಅದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ನಿಜವಾಗಿ ಕಾನೂನಿಗೆ ಗೌರವ ಕೊಡುವ ವ್ಯಕ್ತಿ ಮತ್ತೆ ಮತ್ತೆ ಇಂತಹ ವರ್ತನೆ ಪುನರಾವರ್ತನೆ ತೋರುವುದನ್ನು ನಿಲ್ಲಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!