ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿಗೆ “ಗೋಲ್ಡನ್ ಸ್ಟಾರ್ ರೇಟಿಂಗ್”
ಶಿರ್ವ: ಮಧ್ವ ವಾದಿರಾಜ ತಾಂತ್ರಿಕ ಕಾಲೇಜು 2019-20ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಉದ್ಯಮಶೀಲತೆ ಸಂಬಂಧಿತ ಚಟುವಟಿಕೆಗಳಲ್ಲಿ 4.5 ಗೋಲ್ಡನ್ ಸ್ಟಾರ್ ರೇಟಿಂಗ್ ಪಡೆದಿದೆ.
ಭಾರತದ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ಘಟಕ ದಕ್ಷಿಣ ಭಾರತ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದಿದೆ. ಪ್ರಾರಂಭವಾದ ವರ್ಷದಲ್ಲಿಯೇ ಈ ಶ್ರೇಯಾಂಕವನ್ನು ಗಳಿಸಿರುವುದು ಸಂಸ್ಥೆಯ ಸಾಧನೆಯಾಗಿದೆ. ‘2018ರ ವರ್ಷದಲ್ಲಿ ಭಾರತ ಸರಕಾರದ ಶಿಕ್ಷಣ ಸಚಿವಾಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೌನ್ಸಿಲ್ನ್ನು ಪ್ರಾರಂಭಿಸಿತ್ತು.
ಘಟಕದ ನೇತೃತ್ವವನ್ನು ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್ ಮತ್ತು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅರುಣ್ ಉಪಾಧ್ಯಾಯ ವಹಿಸಿದ್ದಾರೆ. ಮಣಿಪಾಲ್ ಡಾಟ್ ನೆಟ್ನ ಡಾ. ಯು ಸಿ ನಿರಂಜನ್, ಮಣಿಪಾಲದ ಎಂ.ಯು.ಟಿ.ಬಿ.ಐ. ಡಾ.ವೈ ಶ್ರೀಹರಿ ಉಪಾಧ್ಯಾಯ, ಪ್ರೀಮಿಯರ್ ಇನ್ವೆಸ್ಟ್ಮೆಂಟ್ ಹರೀಶ್ ಬೆಳ್ಮಣ್, ಸಂಗಮ್ ವನ್ ಮಂಗಳೂರು ಇದರ ಚಂದ್ರಶೇಖರ್ ಕುತ್ಯಾರ್, ಎನ್ಐಟಿಕೆ-ಸ್ಟೆಪ್ ಮಾಜಿ ನಿರ್ದೇಶಕ ಪ್ರೊ. ಬಿ ಎಸ್ ರೇವಣ್ಕರ್, ಮಾತಾ ಇಂಡಸ್ಟ್ರೀಸ್ ಕಟಪಾಡಿಯ ನರಸಿಂಹ ಇವರ ಸಹಕಾರದೊಂದಿಗೆ ಸಾಧನೆ ಮಾಡಿದೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.