ಉಡುಪಿ: ಆನ್‌ಲೈನ್ ಟ್ರೇಡಿಂಗ್- 17.35 ಲಕ್ಷ ರೂ. ವಂಚನೆ

ಉಡುಪಿ, ಮೇ 10: ಇನ್‌ಸ್ಟಾಗ್ರಾಮ್‌ ನಲ್ಲಿ ಬಂದ ಆನ್‌ಲೈನ್ ಪಾರ್ಟ್‌ಟೈಮ್ ಕೆಲಸ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೇಸಜ್‌ನ ಬಲೆಗೆ ಬಲೆಗೆ ಬಿದ್ದ ಹೇರೂರು ಗ್ರಾಮದ ಕೊಳಂಬೆಯ ಸುಬ್ರಹ್ಮಣ್ಯ ಎಂಬವರು ಕೇವಲ ಮೂರು ದಿನಗಳಲ್ಲಿ ಒಟ್ಟು 17.35 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯ ಸೂಚನೆಯಂತೆ ವಾಟ್ಸಪ್ ನಂಬರ್‌ಗೆ ಮೇಸೆಜ್ ಮಾಡಿದ್ದು, ಅದರಲ್ಲಿ ಬಂದ ಸೂಚನೆಯಲ್ಲಿ ಕೆಲವು ಟಾಸ್ಕ್‌ನ್ನು ಪೂರೈಸಿ 9000 ರೂ ನಷ್ಟು ಹಣ ಪಡೆದಿದ್ದು, ಬಳಿಕ ಟ್ರೇಡಿಂಗ್ ಮಾಡುವ ಬಲುವಾಗಿ ಹಣ ಹೂಡಿಕೆ ಮಾಡಲು ನೀಡಿದ ಸೂಚನೆಯಂತೆ ಮೇ 6ರಿಂದ 9ರ ನಡುವಿನ ಅವಧಿಯಲ್ಲಿ ತನ್ನ ಖಾತೆಯೂ ಅಲ್ಲದೇ ಹೆಂಡತಿ ಹಾಗೂ ಅತ್ತೆಯ ಅಕೌಂಟಿ ನಿಂದಲೂ ಆರೋಪಿ ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ಒಟ್ಟು 17,35,000 ರೂ. ಹಣವನ್ನು ಕಳುಹಿಸಿದ್ದರು.

ಆದರೆ ಹಣವನ್ನು ಪಡೆದ ಆರೋಪಿ ತಮಗೆ ಬರಬೇಕಾದ ಹಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ನಂಬಿಸಿ ಮೋಸ ಗೊಳಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!