ಮಂಗಳೂರು-ಪೂನಾ ಮಾರ್ಗದ ಸಾರಿಗೆ ಆರಂಭ
ಉಡುಪಿ, ಅ. 27:ಮಂಗಳೂರು ವಿಭಾಗದ ಮಂಗಳೂರು ಬಸ್ ನಿಲ್ದಾಣದಿಂದ
ಪೂನಾಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ನಾನ್ ಎಸಿ. ಸ್ಲೀಪರ್ ಸಾರಿಗೆ ಸೌಲಭ್ಯವನ್ನು ಅಕ್ಟೋಬರ್ 26 ರಿಂದಆರಂಭಿಸಲಾಗಿದೆ.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲುಅವಕಾಶ ಕಲ್ಪಿಸಲಾಗುವುದು.
ಸದರಿ ಸಾರಿಗೆಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು,
ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸುವಂತೆ ಮಂಗಳೂರು ಕರಾರಸಾಸಂ (www.ksrtc.in) ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.