ಉಡುಪಿ ನಗರಕ್ಕೆ ಇಂದಿನಿಂದ 3 ದಿನಗಳಿಗೊಮ್ಮೆ ನೀರು ಸರಬರಾಜು
ಉಡುಪಿ, ಮೇ 7: ನಗರಕ್ಕೆ ನೀರು ಪೂರೈಸುವ ಹಿರಿಯಡಕ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ನಗರಸಭೆ ತೀರ್ಮಾನಿಸಿದೆ.
ಮೇ 8ರಿಂದ ರೇಶನಿಂಗ್ ವ್ಯವಸ್ಥೆಯಡಿ ಮೂರು ವಲಯಗಳಾಗಿ ನೀರು ಪೂರೈಕೆ ಮಾಡಲಾಗುವುದು. ಉಡುಪಿ, ಮಣಿಪಾಲ, ಮಲ್ಪೆ ಮೂರು ವಲಯಗಳಾಗಿ ವಿಂಗಡಿಸಿ ಆಯಾ ವಾರ್ಡ್‌ಗಳಿಗೆ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ.
ರೇಶನಿಂಗ್ ಪ್ರಕ್ರಿಯೆ ವೇಳೆ ಎತ್ತರದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ಪೂರೈಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು ಈ ಭಾಗದ ವಾರ್ಡ್ ನಗರಸಭೆ ಸದಸ್ಯರ ಕೋರಿಕೆ ಮೇರೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ನೀರಿನ ಮಿತ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡಬೇಕು ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.