ಉಡುಪಿ: ವಾಟ್ಸಾಪ್ ಲಿಂಕ್‌ಗೆ ಕ್ಲಿಕ್‌ ಮಾಡಿ 1.75 ಲಕ್ಷ ರೂ. ಕಳಕೊಂಡ ನಿವೃತ್ತ ಬ್ಯಾಂಕ್ ಅಧಿಕಾರಿ

ಉಡುಪಿ: ವಾಟ್ಸಾಪ್‌ಗೆ ಬಂದ ಲಿಂಕ್‌ಗೆ ಕ್ಲಿಕ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡ ಬಗ್ಗೆ ವರದಿಯಾಗಿದೆ.

ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ಮೇ 3ರಂದು ವಾಟ್ಸಾಪ್ ಗ್ರೂಪ್‌ಗೆ ಅನಾಮ ಧೇಯ ನಂಬರ್ ನಿಂದ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದು, ಕೂಡಲೇ ಅವರ ಮೂರು ಖಾತೆಗಳಲ್ಲಿದ್ದ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!