ಶಿರ್ವಾ: ನಶೆಯಲ್ಲಿ ವಿವಾಹಿತ ಮಹಿಳೆ ಬ್ಲೇಡಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆ!
ಶಿರ್ವಾ:(ಉಡುಪಿ ಟೈಮ್ಸ್ ವರದಿ)ಕುಡಿತದ ನಶೆಯಲ್ಲಿ ವಿವಾಹಿತ ಮಹಿಳೆಯೊರ್ವಳು ತನ್ನ ಕೈಯನ್ನು ಬ್ಲೇಡಿನಲ್ಲಿ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಎಂಬಲ್ಲಿ ನಡೆದಿದೆ.
ಬಂಟಕಲ್ಲು ಅರಸಿಕಟ್ಟೆ ನಿವಾಸಿ ಪ್ರೇಮಾ(38) ಆದಿತ್ಯವಾರ ಬೆಳಿಗ್ಗೆ11.30 ಗಂಟೆಗೆ ವಿಪರೀತ ಕುಡಿದು ಮನೆಯಲ್ಲಿ ಪತಿ ರಮೇಶ ಜೊತೆ ಗಲಾಟೆ ಮಾಡಿದ್ದಳು. ರಾತ್ರಿಯಾದರೂ ನಶೆ ಇಳಿಯದ ಕಾರಣ ಮತ್ತೆ ಗಂಡನ ಜೊತೆ ಗಲಾಟೆ ಪ್ರಾರಂಭಿಸಿದ್ದಳು. ರಾತ್ರಿ 8.30 ಸುಮಾರಿಗೆ ಗಂಡ ಊಟ ಮಾಡಿ ಮಲಗಲು ಪತ್ನಿಗೆ ತಿಳಿಸಿದಾಗ, ಈಕೆ ಕೋಪಗೊಂಡು ಕೋಣೆಯ ಬಾಗಿಲನ್ನು ಹಾಕಿದ್ದಳು. ನಂತರ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾ ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೊಯ್ದಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ವಿಪರೀತ ರಕ್ತಸ್ರಾವವಾಗಿತ್ತು, ತಕ್ಷಣ ಮನೆಯವರು ಚಿಕಿತ್ಸೆಗಾಗಿ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.