ಉಡುಪಿ: ವ್ಯವಸ್ಥಿತವಾಗಿ ಕುಡಿಯುವ ನೀರು ಸರಬರಾಜಿಗೆ ಜಿಲ್ಲಾಧಿಕಾರಿಗೆ ಮನವಿ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಪ್ರತಿ ವರ್ಷದಂತೆ ಬೇಸಿಗೆಯ ಕೊನೆಯ ಅವಧಿಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿ ಹಾಗೂ ಆಸುಪಾಸಿನ ಪ್ರದೇಶಕ್ಕೆ ನೀರು ಪೂರೈಸುತ್ತಿದ್ದ ಬಜೆ ಅಣೆಕಟ್ಟಿನಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಹಾಹಾಕಾರ ಎಲ್ಲೆಡೆ ಕೇಳಿ ಬರುತ್ತಿದ್ದು ಇದನ್ನು ಮನಗಂಡು ಕುಡಿಯುವ ನೀರಿನ ಸರಬರಾಜನ್ನು ಎತ್ತರ ಪ್ರದೇಶಗಳಿಗೆ ನಿರಂತರ ಹಾಗೂ ವ್ಯವಸ್ಥಿತವಾಗಿ ಪೂರೈಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್ ಪುತ್ತೂರು, ನಗರಸಭಾ ಮಾಜಿ ಉಪಾಧ್ಯಕ್ಷರಾದ ಸಂಧ್ಯಾ ತಿಲಕ್ ರಾಜ್, ನಗರಸಭಾ ಸದಸ್ಯರಾದ ವಿಜಯ್ ಪೂಜಾರಿ, ನಾಯಕರಾದ ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ, ಶಶಿರಾಜ್ ಕುಂದರ್, ರಮೇಶ್ ಪೂಜಾರಿ, ಶರತ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಕೃಷ್ಣ ಹೆಬ್ಬಾರ್, ಲಕ್ಷ್ಮಣ್ ಪೂಜಾರಿ, ಸತೀಶ್ ಕುಮಾರ್ ಮಂಚಿ, ಭರತ್ ಕುಮಾರ್, ಸದಾನಂದ ಮೂಲ್ಯ, ಜಯಶ್ರೀ ಶೇಟ್, ಅರ್ಚನಾ ದೇವಾಡಿಗ, ಸಾಯಿರಾಜ್, ಅಬ್ಬೂಬಕ್ಕರ್ ಖಾಸಿಂ ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.