ಉಡುಪಿ: ಸಿಟಿ ಬಸ್ ನಿಲ್ದಾಣ ಬಳಿ “ಜ್ಯೋತಿ ಸ್ವೀಟ್ಸ್” ಬೇಕರಿ ಉದ್ಘಾಟನೆ
ಉಡುಪಿ, ಅ. 24: ಸಿಟಿ ಬಸ್‌ನಿಲ್ದಾಣದ ಭಾಸ್ಕರ ವಿಹಾರ್ ಕಾಂಪ್ಲೆಕ್ಸ್‌ನ ಪ್ರಿಯದರ್ಶಿನಿ ಹೋಟೆಲ್ ಬಳಿ ನೂತನ ಬೇಕರಿ ಸಂಸ್ಥೆ ‘ಜ್ಯೋತಿ ಸ್ವೀಟ್ಸ್ ಶನಿವಾರ ಉದ್ಘಾಟನೆಗೊಂಡಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಉದ್ಘಾಟಿಸಿ ಮಾತನಾಡಿದ ಅವರು ದೇಶ ವಿದೇಶಗಳಲ್ಲಿ ಉಡುಪಿ ಹೊಟೇಲ್‌ಗಳಿವೆ.ಆದರೆ ಅದನ್ನು ಅಲ್ಲಿನವರೇ ನಡೆಸುತ್ತಿದ್ದಾರೆ. ಉಡುಪಿ ಖಾದ್ಯವನ್ನು ನಾವೇ ಅಭಿವೃದ್ಧಿಪಡಿಸಿ, ಅದನ್ನು ಬ್ಯಾಂಡ್ ಖಾದ್ಯಗಳನ್ನಾಗಿ ಪರಿವರ್ತಿಸಿ ಅದನ್ನು ಮಾರಾಟ ಮಾಡಬೇಕೆಂದರು.
ಈ ಹೊಸ ಜ್ಯೋತಿ ಸ್ವೀಟ್ಸ್ ವಿಶೇಷ ಖಾದ್ಯಗಳ ಮೂಲಕ ಹೆಸರು ಪಡೆಯುವಂತಾಗಲಿ ಎಂದು ಹಾರೈಸಿದರು. ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಭಾಸ್ಕರ್ ವಿಹಾರ್ ಕಾಂಪ್ಲೆಕ್ಸ್‌ನ ಮಾಲಕ ಡಾ| ಭಾಸ್ಕರ್ ಶೆಟ್ಟಿ , ಮಹಮ್ಮದ್ ಶೀಶ್, ಕಡಿಯಾಳಿ ಮಾತೃ ಮಂಡಳಿ ಅಧ್ಯಕ್ಷೆ ಪದ್ಮಾ ರತ್ನಾಕರ್, ನಗರಸಭೆ ಸದಸ್ಯ ಟಿ.ಜಿ.ಹೆಗ್ಡೆ ಮೆಸ್ಕಾಂ ಎಇಇ ಅರವಿಂದ್ ಕೆ.ಎಸ್., ವಿಮಲಾ ಕಡೆಕಾರ್, ಅಪ್ಪಿ ಬೈಲೂರು ಕಾರ್ಕಳ, ರತ್ನಾಕರ ಪೂಜಾರಿ ಕುಕ್ಕಿಕಟ್ಟೆ ಭಾಸ್ಕರ್ ಎಂ. ಪಾಲನ್ ಕಲ್ಮಾಡಿ, ಕಿರುತೆರೆ ನಟ ಪ್ರದೀಪ್‌ಚಂದ್ರ ಕುತ್ತಾಡಿ, ಹಾಸ್ಯ ಕಲಾವಿದ ಅರುಣ್ ಕುಮಾರ್ ಜಾರ್ಕಳ, ಸ್ತ್ರೀವೇಷಧಾರಿ ಶಶಿಕಾಂತ್ ಶೆಟ್ಟಿ ಯೋಗರತ್ನ ಗಿನ್ನೆಸ್ ದಾಖಲೆ ಪುರಸ್ಕೃತೆ ತನುಶ್ರೀ ಪಿತ್ರೋಡಿ, ಜ್ಯೋತಿ ಸ್ವೀಟ್ಸ್ ಮಾಲಕ ಸುರೇಶ್ ಅಮೀನ್, ಮ್ಯಾನೇಜರ್ ಮೋಹನ್, ದಿನೇಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಉದ್ಘಾಟನೆ ಪ್ರಯುಕ್ತ ಅ.24ರಂದು ಹುಟ್ಟುಹಬ್ಬವನ್ನಾಚರಿಸುತ್ತಿರುವ 10 ವರ್ಷದೊಳಗಿನ ಮಕ್ಕಳಿಗೆ ಕೇಕ್ ವಿತರಿಸಿಲಾಯಿತು. ಕೋವಿಡ್-19 ತಡೆಗಟ್ಟಲು ಗ್ರಾಹಕರಿಗೆ 700 ಮಾಸ್ಟ್‌ಗಳನ್ನು ಸಂಸ್ಥೆ ವತಿಂದ ಉಚಿತವಾಗಿ ನೀಡಲಾಯಿತು.