ಧರ್ಮ ಅಪಾಯದಲ್ಲಿದೆ ಅನ್ನೋದು ರಾಜಕೀಯ ಹಿತಾಸಕ್ತಿ ಘೋಷಣೆ
ನಾರಾಯಣ ಗುರುಗಳು ಪ್ರತಿಪಾದಿಸಿದ “ಒಂದೇ ಮತ ಒಂದೇ ಜಾತಿ ಒಂದೇ ದೇವರು” ತತ್ವವೇ ಭವಿಷ್ಯದ ದಾರಿದೀಪ
ಎಲ್ಲರ ಮನೆಯ ಮಕ್ಕಳು ಕಲಿತು ವಿದ್ಯಾವಂತರಾಗಿ ತಮ್ಮ ತಮ್ಮ ಮನೆಯನ್ನು ಬೆಳಗೆಬೇಕೆ ಹೊರತು ಜೈಲು ಕಂಬಿ ಎಣಿಸುವಂತಾಗಬಾರದು ಶ್ರೀ ನಾರಾಯಣ ಗುರು ಯುವ ವೇದಿಕೆ ಅಭಿಮತ.
ಉಡುಪಿ: ಸಾರ್ವರ್ತಿಕ ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಉಡುಪಿಗೆ ಆಗಮಿಸಿದ ಶಿವಮೊಗ್ಗ ಲೋಕ ಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ದಂಪತಿಗಳನ್ನು ಶ್ರೀನಾರಾಯಣ ಗುರು ವೇದಿಕೆಯ ವತಿಯಿಂದ ಅಭಿನಂದಿಸಿ ಪ್ರಸಕ್ತ ದಿನಗಳಲ್ಲಿ ಕೆಲವು ರಾಜಕೀಯ ಪಕ್ಷಗಳು ಒಂದು ಧರ್ಮವನ್ನು ವೈಭವೀಕರಿಸುತ್ತಿದೆ .ಧರ್ಮ ಅಪಾಯದಲ್ಲಿದೆ ಧರ್ಮವನ್ನು ರಕ್ಷಿಸುವುದಕ್ಕಾಗಿ ತಮಗೆ ಮತವನ್ನು ಚಲಾಯಿಸಬೇಕು ಎಂದು ಪ್ರಚಾರ ಮಾಡುತ್ತಿದೆ. ಆದರೆ ಯಾವ ಧರ್ಮವು ಅಪಾಯದಲ್ಲಿಲ್ಲ ಮತ್ತು ಧರ್ಮವನ್ನು ನಾವು ಯಶ್ಚಿತ ಮನುಷ್ಯರು ರಕ್ಷಿಸಬೇಕಾಗಿಲ್ಲ, ಧರ್ಮ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಸಮರ್ಥವಾಗಿದೆ.
ಮುಂದಿನ ದಿನಗಳಲ್ಲಿ ಒಂದೇ ಮತ ಒಂದೇ ಜಾತಿ ಒಂದೇ ದೇವರು ಎಂದು ಘೋಷಿಸಿದ ನಾರಾಯಣ ಗುರುಗಳ ತತ್ವಾದರ್ಶಗಳು ನಾಡಿನಲ್ಲಿ ನೆಲೆವೂರಲಿದೆ. ಇದರಿಂದಾಗಿ ಭಾರತ ದೇಶದ ಸಂವಿಧಾನದಲ್ಲಿ ಹೇಳಿದ ಹಾಗೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿ ಅಭಿವೃದ್ಧಿಗೊಳ್ಳಲಿದೆ. ನಮ್ಮ ಮಕ್ಕಳು ವಿದ್ಯೆಯನ್ನ ಕಲಿತು ನಮ್ಮ ಮನೆಯನ್ನ ಬೆಳಗಬೇಕೆ ಹೊರತು ಯಾರದು ಹುನ್ನಾರಕ್ಕೆ ಬಲಿಯಾಗಿ ಧರ್ಮ ರಕ್ಷಣೆಯ ಹೆಸರಲ್ಲಿ ಜೈಲ ಕಂಬಿಯನ್ನು ಎಣಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ನಾವು ಎಚ್ಚರವನ್ನು ವಹಿಸಿಕೊಳ್ಳಬೇಕಾಗಿದೆ .
ಈ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಯಲ್ಲಿ ನಂಬಿಕೆ ಇರುವ ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ಮತವನ್ನು ಚಲಾಯಿಸುವುದರ ಮೂಲಕ ಭಾವನಾತ್ಮಕ ಸಂಗತಿಗಳನ್ನು ವೈಭವೀಕರಿಸಿ ಅಧಿಕಾರ ಹಿಡಿಯ ಬಯಸುವ ಶಕ್ತಿಗಳನ್ನು ಸೋಲಿಸಿ ಬೇಕು ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ನಾರಾಯಣ ಗುರು ಯುವ ವೇದಿಕೆಯ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್, ಪ್ರಶಾಂತ್ ಪೂಜಾರಿ, ಮಹೇಶ್ ಪೂಜಾರಿ ಬಿಜೂರು , ರಾಘವೇಂದ್ರ ಬಿಲ್ಲವ ಬೈಂದೂರು , ಸಾಯಿ ರಾಜ್ ಕೋಟ್ಯಾನ್ , ವಿಜಯ್ ಪೂಜಾರಿ, ಕಿದಿಯೂರ್ ,ಸತೀಶ್ ಪೂಜಾರಿ ಬನ್ನಂಜೆ ,ವಿಕೇಶ್ ಪೂಜಾರಿ ಹೆಜಮಾಡಿ, ಪ್ರವೀಣ್ ಕೊಡವೂರು, ರವಿಚಂದ್ರ ಬೈಂದೂರು, ಸತೀಶ್ ಪೂಜಾರಿ ಅಲೆವೂರು ಮುಂತಾದವರು ಉಪಸ್ಥಿತರಿದ್ದರು.