ಅಲೆವೂರು: ಅ. 25ರಂದು “ಬಿಸಿನೆಸ್ ಕ್ಲಾಸ್ ವೆನ್ಚರ್ಸ್” & “ಅಮೃತ್ ಟ್ರೇಡರ್ಸ್” ಉದ್ಘಾಟನೆ
ಉಡುಪಿ: ಅಲೆವೂರು ಮಣಿಪಾಲ ರಸ್ತೆಯ ವಿ4 ವಿಶ್ಟ್ ಟೌನ್ ಶಿಪ್‌ನ ಕಟ್ಟಡದಲ್ಲಿ ಅ. 25 ರಂದು ನೂತನ “ಅಮೃತ್ ಟ್ರೇಡರ್ಸ್ಸ್ ಪ್ರೈವೇಟ್ ಲಿಮಿಟೆಡ್ ” ಮತ್ತು “ಬಿಸಿನೆಸ್ ಕ್ಲಾಸ್ ವೆನ್ಚರ್ಸ್” ಉದ್ಘಾಟನೆಗೊಳ್ಳಲಿದೆ.
ಅಲೆವೂರು, ಕರ್ವಾಲು, ಮಣಿಪಾಲ, ಮಂಚಿ, ಕುಕ್ಕಿಕಟ್ಟೆ ಸುತ್ತಮುತ್ತಲ ಪ್ರದೇಶಗಳ ಜನರ ದಿನಸಿ ಸಾಮಗ್ರಿಗಳನ್ನು ಹೋಲ್ ಸೇಲ್ ದರದಲ್ಲಿ ಹೋಮ್ ಡೆಲಿವರಿ ಸೇವೆ ನೀಡುವ “ಅಮೃತ ಟ್ರೇಡರ್ಸ್ಸ್” ಶುಭಾರಂಭಗೊಳ್ಳಲಿದೆ.
“ಬಿಸಿನೆಸ್ ಕ್ಲಾಸ್ ವೆನ್ಚರ್‍ಸ್ ಪ್ರೈವೇಟ್ ಲಿಮಿಟೆಡ್” ಸಂಸ್ಥೆಯಡಿ ಜಿಲ್ಲೆಯ ಪ್ರವಾಸಿ ಕೇಂದ್ರಗಳ ವೀಕ್ಷಣೆ ಮಾಡಲು “ಉಡುಪಿ ದರ್ಶನ” ಎಂಬ ಹೊಸ ಪರಿಕಲ್ಪನೆಯೊಂದಿಗೆ ಪ್ರವಾಸಿಗರಿಗೆ ಅತೀ ಕಡಿಮೆ ಬಜೆಟ್‌ನಲ್ಲಿ ಜಿಲ್ಲೆಯ ಪ್ರೇಕ್ಷಣಿಯಾ ಸ್ಥಳವನ್ನು ಪರಿಚಯಿಸಲಾಗುವುದು.
ಬಿಸಿನೆಸ್ ಕ್ಲಾಸ್ ವೆನ್ಚರ್‍ಸ್‌ನಲ್ಲಿ ವಿಮಾನಯಾನ, ರೈಲ್ವೆ, ಬಸ್ ಟಿಕೆಟ್, ಹಾಲಿಡೇ ಪ್ಯಾಕೇಜ್, ಪಾಸ್ ಪೋರ್ಟ್, ವೀಸಾ ಸಹಿತ ಹಲವಾರು ಸೇವೆಗಳು ಜನರಿಗೆ ನೀಡಲಿದೆಂದು ಸಂಸ್ಥೆಯ ನಿರ್ದೆಶಕ ಅರುಣ್ ಕುಮಾರ್ ತಿಳಿಸಿದ್ದಾರೆ