ಉಡುಪಿ: ಶ್ರೀದೇವಿ ಗ್ಲಾಸ್ & ಅಲ್ಯೂಮಿನಿಯಂ ಎಕ್ಸ್ಟ್ರೂಶನ್ಸ್ನ ನೂತನ ಮಳಿಗೆ ಉದ್ಘಾಟನೆ
ಉಡುಪಿ, ಅ. 24: ಅಂಬಲಪಾಡಿ ರಾಷ್ಟ್ರೀಯಾ ಹೆದ್ದಾರಿ ಬಳಿ ಸ್ಥಳಾಂತರಗೊಂಡ ಶ್ರೀದೇವಿ ಗ್ಲಾಸ್ & ಅಲ್ಯೂಮಿನಿಯಂ ಎಕ್ಸ್ಟ್ರೂಶನ್ಸ್ನ ನೂತನ ಮಳಿಗೆಯ ಉದ್ಘಾಟನೆಯನ್ನು ಉಜ್ವಲ್ ಡೆವಲಪರ್ನ ಮಾಲಕ ಪಿ. ಪುರುಷೋತ್ತಮ ಶೆಟ್ಟಿ ನೆರವೇರಿಸಿದರು.
ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲಾ ಬಿಲ್ಡರ್ ಅಸೋಸಿಯೇಶನ್ ಅಧ್ಯಕ್ಷ ಜೆರಿ ವಿನ್ಸೆಂಟ್ ಡಯಾಸ್ ದೀಪ ಪ್ರಜ್ವಲಿಸಿ ಮಾತನಾಡಿದ ಇವರು ಶ್ರೀ ದೇವಿ ಗ್ಲಾಸ್ ಹೌಸ್ ಸಂಸ್ಥೆಯು ಉಡುಪಿ ಪರಿಸರಕ್ಕೆ ದೇಶ ವಿದೇಶಗಳ ವಿವಿಧ ವಿನ್ಯಾಸದ ಗ್ಲಾಸ್ಗಳನ್ನು ಪರಿಚಯಿಸಿ ಮಾರಾಟ ಮಾಡುವ ಮೂಲಕ ಯಶಸ್ವಿ ಉದ್ಯಮವಾಗಿ ಜಿಲ್ಲೆಯಲ್ಲಿ ಸೇವೆ ನೀಡುತ್ತಿದೆ.
ಡಿಸೈನ್ ಗ್ಯಾಸ್ ಮತ್ತು ಇನ್ನಿತರ ವೈವಿಧ್ಯಮಯ ಫೈಬರ್ ಡೋರ್ ಗ್ರಾಹಕರ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡಿದೆ. ಇಲ್ಲಿ ಹೊಸ ಮನೆ ನಿರ್ಮಣವಾದ ನಂತರ ಮನೆಗಳ ಅಂದ ಹೆಚ್ಚಿಸಲು ದೊರೆಯುವ ವಸ್ತುಗಳು ಶ್ರೀಮಂತರಿಂದ ಹಿಡಿದು ಬಡ, ಮಧ್ಯಮ ವರ್ಗಕ್ಕೆ ಗ್ಲಾಸ್, ಫೈಬರ್ ಡೋರ್, ವುಡನ್ ಕೋಟಿಂಗ್ ಹೆಚ್ಚು ಹೆಸರುವಾಸಿಯಾಗಿದೆಂದರು.
ಅಧ್ಯಕ್ಷತೆ ವಹಿಸಿದ್ದ ಎಸಿಸಿಎ ಉಡುಪಿಅಧ್ಯಕ್ಷಎಂ.ಗೋಪಾಲಭಟ್ ಮಾತನಾಡಿ, ಸಮಯಕ್ಕೆ ಸರಿಯಾಗಿ ಉತ್ತಮ ಗುಣಮಟ್ಟವನ್ನು ಉತ್ಪನ್ನಗಳನ್ನು ಒದಗಿಸಿಕೊಡುವುದು, ಶಿಸ್ತು, ಕಠಿಣ ಪರಿಶ್ರಮ, ಸಮಯಪ್ರಜ್ಞೆಯ ಸೇವೆಯಿಂದ ಗ್ರಾಹಕರ ಉತ್ತಮ ಬಾಂಧವ್ಯವಿದ್ದರೆ ಯಶಸ್ವಿ ಉದ್ಯಮವಾಗಿ ಬೆಳೆಯುತ್ತದೆಂದರು ಬೆಳೆದ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲೆಂದು ಹಾರೈಸಿದರು.
ಶ್ರೀದೇವಿ ಗ್ಲಾಸ್ ಹೌಸ್ನ ಮಾಲಕ ಸುರೇಶ್ ನಾಯಕ್ ಪರ್ಕಳ ಮತ್ತು ಸುಮನಾ ನಾಯಕ್ ದಂಪತಿಯನ್ನು ಅಭಿನಂದಿಸಲಾಯಿತು. ಗೀತಾ ವಿಧುಶೇಖರ್, ನಿಧಿ, ಲಕ್ಕಿ ಸಹಿತ ಗಣ್ಯರು, ಉಸುತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ, ಲಕ್ಷ್ಮೀನಾರಾಯಣ ಉಪಾಧ್ಯ ಪಾಡಿಗಾರ್ ಕಾರ್ಯಕ್ರಮ ನಿರ್ವಹಿಸಿದರು.
ಒಂದೇ ಸೂರಿನಡಿ ಎಲ್ಲಾ ವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಗ್ಲಾಸ್ ಮತ್ತು ಅಲ್ಯೂಮಿನಿಯಂ ಹಾಗೂ ಸಿಲಿಂಗ್ ಮೇಟಿರಿಯಲ್, ವುಡನ್ , ಸ್ಟೀಲ್ ಎನೋಡೈಸ್ಡ್ ವಸ್ತುಗಳು, ಎಲ್ಲಾ ಬಗೆಯ ಕಲರ್ ಕೋಟಿಂಗ್ಸ್, ಎಸಿಪಿ ಶೀಟ್ಸ್, ಪಿವಿಸಿ ಡೋರ್ ಸೀಲಿಂಗ್ ಮೆಟೀರಿಯಲ್ಸ್, ಹಾರ್ಡ್ವೇರ್ ಐಟಮ್ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಪುಷ್ಪ ವುಡನ್ ಕೋಟಿಂಗ್ಸ್: ತಮ್ಮದೆ ಸಂಸ್ಥೆಯ ನುರಿತ ಸಿಬಂದಿಗಳಿಂದ ವುಡನ್ ಕೋಟಿಂಗ್ಸ್ ಪ್ರಾರಂಭಿಸಿದ್ದು, ಈಗಾಗಲೇ ಉಡುಪಿ, ಮಲ್ಪೆ, ಮಣಿಪಾಲ ಅಸುಪಾಸಿನ ಸಾವಿರಾರು ಮಂದಿ ನಮ್ಮ ನೈಪುಣ್ಯದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ವುಡನ್ ಕೋಟಿಂಗ್ಸ್ ಮಧ್ಯಮ , ಬಡ ವರ್ಗದ ಜನತೆ ಸಹಕಾರಿಯಗುತ್ತಿದೆಂದು ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥ ವಿಧುಶೇಖರ್ ತಿಳಿಸಿದ್ದಾರೆ