ಬಂಟ್ವಾಳ ಫಾರೂಕ್ ಹತ್ಯೆ ಪ್ರಕರಣ: ಆರೋಪಿ ಮೇಲೆ ಗುಂಡಿನ ದಾಳಿ!
ಬಂಟ್ವಾಳ, ಅ. 24 : ಮೆಲ್ಕಾರ್ನಲ್ಲಿ ಶುಕ್ರವಾರ ಸಂಜೆ ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನ ಫಾರೂಕ್ ನ ಕೊಲೆಗೈದ ಆರೋಪಿ ಖಲೀಲ್ ಮತ್ತು ಆತನ ಜೊತೆ ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧಾರಿಸಿ ಅವರನ್ನು ಬೆನ್ನಟ್ಟಿದ ಪೋಲೀಸರ ಮೇಲೆ ತಲವಾರು ದಾಳಿ ನಡೆದಿದೆ. ಆ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಅವರಿಗೆ ಹಾಗೂ ಕೊಲೆ ಆರೋಪಿ ಖಲೀಲ್ಗೆ ಗಾಯವಾಗಿದ್ದು ಇಬ್ಬರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಆ ಹಿನ್ನಲೆಯಲ್ಲಿ ನಟೋರಿಯಸ್ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾದ ವೇಳೆ ಪೋಲೀಸರ ಮೇಲೆ ದಾಳಿ ಗೆ ಮುಂದಾಗಿದ್ದ ಆರೋಪಿಗಳಿಗೆ ಗುಂಡಿನ ದಾಳಿ ನಡೆಸಿ ಬಂಧನ ನಡೆಸಿದ್ದಾರೆ. ಆ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ. ಖಲೀಲ್ ಖತನರ್ ಕೋಮು ಗಲಭೆ ಸಹಿತ ಅನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಭೆಗೆ ಈತ ಪ್ರಮುಖನಾಗಿದ್ದ. ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಈತನ ಗಡಿಪಾರು ಕೂಡ ಆಗಿತ್ತು. |