ಬಂಟ್ವಾಳ: ಮೆಲ್ಕಾರ್ ನಲ್ಲಿ ಇನ್ನೋರ್ವ ರೌಡಿಶೀಟರ್ ನ ಬರ್ಬರ ಹತ್ಯೆ
ಬಂಟ್ವಾಳ: (ಉಡುಪಿ ಟೈಮ್ಸ್ ವರದಿ) ಎರಡು ದಿನಗಳ ಹಿಂದೆ ನಟ ಸುರೇಂದ್ರ ಬಂಟ್ವಾಳ್ ಕೊಲೆ ಕೃತ್ಯದ ತನಿಖೆಯಲ್ಲಿರುವ ಪೊಲೀಸರಿಗೆ ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ರೌಡಿಶೀಟರ್ ಮೇಲೆ ತಲವಾರು ದಾಳಿಗೈದು ಹತ್ಯೆಗೈದ ಘಟನೆ ನಡದಿದ್ದು,ಬಂಟ್ವಾಳ ಪರಿಸರವನ್ನು ಬೆಚ್ಚಿಬೀಳಿಸಿದೆ. ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂಬಾತ ಹಂತಕರ ತಲವಾರಿನೇಟಿಗೆ ಮಟಾಷ್ ಆಗಿದ್ದಾನೆ.
ಆತನ ಸೇಹಿತನೇ ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಕಲ್ಲಡ್ಕದಿಂದ ಮೆಲ್ಕಾರ್ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಹಂತಕರು ತಲುವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆಅ ಎಂದು ತಿಳಿದು ಬಂದಿದೆ.ಪರಿಣಾಮ ಗಂಭೀರಗಾಯಗೊಂಡ ಫಾರೂಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಫಾರೂಕ್ ಸ್ನೇಹಿತನೋರ್ವನೊಂದಿಗೆ ಉಂಟಾದ ಮುನಿಸು ಕೊಲೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ , ಎಸ್.ಐ.ಪ್ರಸನ್ನ, ಬೇಟಿ ನೀಡಿದ್ದಾರೆ.ಎರಡು ದಿನಗಳ ಹಿಂದೆಯಷ್ಠೆ ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿ ನಟ ಸುರೇಂದ್ರ ಬಂಟ್ವಾಳ್ ನ ಕೊಲೆ ಕೃತ್ಯ ನಡೆದಿದ್ದು,ಇದಾದ ಎರಡೇ ದಿನದಲ್ಲಿ ಮತ್ತೊಬ್ಬ ರೌಡಿಶೀಟರ್ ಕೊಲೇಗೀಡಾಗಿದ್ದು,ಪೊಲೀಸರ ತಲೆ ನೋವು ತರಿಸಿದೆ.