ಉದ್ಯಾವರ: ನಿರ್ಮಾಣ ಹಂತದ ಮನೆಗೆ ಸಹೋದರನಿಂದ ಹಾನಿ- ಪ್ರಕರಣ ದಾಖಲು

ಕಾಪು, ಎ.17: ನಿಮಾಣ ಹಂತದ ಮನೆಗೆ ಹಾನಿಗೈದು ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಘಟನೆ ಉದ್ಯಾವರದಲ್ಲಿ ಎ.14ರಂದು ಬೆಳಗ್ಗಿನ ಜಾವ ನಡೆದಿದೆ.

ಉದ್ಯಾವರದ ಪರಮೇಶ್ವರ ಎಂಬವರು 7 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದು, ಪಕ್ಕದ ಮನೆಯಲ್ಲಿರುವ ಇವರ ತಮ್ಮ ರಮೇಶ್ ಈ ವಿಚಾರದಲ್ಲಿ ಅನೇಕ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ಪರಮೇಶ್ವರ ಕುಟುಂಬ ಸಮೇತ ತನ್ನ ಸಂಬಂಧಿಕರ ಮನೆ ಕಿನ್ನಿಮೂಲ್ಕಿಯಲ್ಲಿ ವಾಸಮಾಡಿಕೊಂಡಿದ್ದರು.

ಪರಮೇಶ್ವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ರಮೇಶ್, ಕಬ್ಬಿಣದ ಏಣಿ ಮತ್ತು ಸಲಿಕೆಯನ್ನು ಬಳಸಿ ಅವರಣ ಗೋಡೆಯನ್ನು ಜಖಂಗೊಳಿಸಿರುವುದಲ್ಲದೇ, ಅಡುಗೆ ಮನೆಯ ಗೋಡೆಯನ್ನು ಜಖಂಗೊಳಿಸಿ ಸುಮಾರು 1ಲಕ್ಷ ರೂ. ನಷ್ಟುಂಟುಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!