ದೇಶಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲು ದೇಶದ ಕಾನೂನು ಸುವ್ಯವಸ್ಥೆ ಕಾರಣ: ಬೊಮ್ಮಾಯಿ
ಹಾವೇರಿ: ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಲು ಈ ದೇಶದ ಕಾನೂನು ಕಾರಣವಾಗಿದೆ. ದೇಶದಲ್ಲಿ ಕಾನೂನು ಸುವಸ್ಥೆ ಸರಿಯಾಗಿದ್ದರೆ ಬಂಡವಾಳ ಹೂಡಿಕೆ ಹೆಚ್ಚಳವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಭಾಗಿ ಮಾತನಾಡಿದ ಅವರು, ವಕೀಲವವೃತ್ತಿ ಬಹಳ ವಿಶಿಷ್ಟ ವೃತ್ತಿ, ನ್ಯಾಯದಾನ ಶ್ರೇಷ್ಠ ವಾಗಿರುವ ದಾನ. ಪ್ರಜಾಪ್ರಭುತ್ವ ದಲ್ಲಿ ಮುಕ್ತವಾದ ಅವಕಾಶ ಸ್ವಾತಂತ್ರ್ಯ ಎಷ್ಟಿದೆಯೋ ಅಷ್ಡೇ ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗೆ ಎಷ್ಟು ಗೌರವಿಸುತ್ತೇವೊ, ಕರ್ತವ್ಯಗಳೂ ಅಷ್ಟೇ ಗೌರವಿಸಬೇಕು ಎಂದರು. ನಾನು ವಕೀಲರ ಕುಟುಂಬದಿಂದ ಬಂದವನು. ನಮ್ಮ ಅಜ್ಜ ಹಾಗೂ ತಂದೆ ವಕೀಲರಾಗಿದ್ದರು. ನಾನು ಹತ್ತಿರದಿಂದ ವಕೀಲರ ವೃತ್ತಿಯನ್ನು ನೋಡಿದ್ದೇನೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಫಾಲಿನಾರಿಮನ್, ಸೋಲಿಸೊರಾಬ್ಜಿ ಅವರಂತಹ ಹಿರಿಯ ವಕೀಲರ ಸಂಪರ್ಕ ಪಡೆಯಲು ಅನುಕೂಲವಾಯಿತು ಎಂದರು.
ದೇಶದ ಸಂವಿಧಾನ ರಚನೆಯಲ್ಲಿ ನ್ಯಾಯವಾದಿಗಳ ಪಾಲು ದೊಡ್ಡದಿದೆ. ಅಂಬೇಡ್ಕರ್ ಅವರೇ ಸ್ವತ ನ್ಯಾಯವಾದಿಗಳಾಗಿದ್ದರು. ಅವರು ಜಗತ್ತಿನ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಸಂಸತ್ತಿಗೆ ಆಯ್ಕೆ ಆಗುವುದರಲ್ಲಿ ವಕೀಲರ ಸಂಖ್ಯೆ ಹೆಚ್ಚಿತ್ತು. ಹಂತ ಹಂತವಾಗಿ ಕಡಿಮೆಯಾಗುತ್ತ ಬಂದಿದೆ ಎಂದರು. ನಾನು ಕಾನೂನು ಸಚಿವನಾಗಿ ಕೆಲಸ ಮಾಡುವ ಅವಕಾಶ ದೊರೆತಿತ್ತು. ಕಾನೂನು ರಚನೆಯಲ್ಲಿ ಸ್ಪಷ್ಟತೆ ಇರಬೇಕು, ಗೊಂದಲಗಳು ಇರಬಾರದು. ಯಾರಿಗೆ ಕಾನೂನು ಮಾಡುತ್ತಿದ್ದೇವೆ. ಯಾವ ಕಾರಣಕ್ಕೆ ಕಾನೂನು ಮಾಡುತ್ತಿದ್ದದೇವೆ ಎನ್ನುವುದನ್ನು ತಿಳಿದುಕೊಂಡಿರ ಬೇಕು. ಕ್ರೈಮ್ ಲೀಡ್ಸ್ ಲಾ ಎನ್ನುವ ಗಾದೆ ಮಾತಿದೆ. ಇತ್ತೀಚೆನೆ ಸೈಬರ್ ಕ್ರೈಮ್ ಹೆಚ್ಚಳವಾಗುತ್ತಿವೆ. ಅದನ್ನು ಪತ್ತೆ ಹಚ್ಚಲು ನಾವು ಕಾನೂನು ತಿದ್ದುಪಡಿ ತಂದೆವು. ಅದರಿಂದ ಸೈಬರ್ ಕ್ರೈಮ್ ನಿಯಂತ್ರಿಸಲು ಅನುಕೂಲವಾಗಿದೆ ಎಂದರು.
ಮೋದಿಯವರು ಜನಸಂಖ್ಯೆಯನ್ನು ಬಂಡವಾಳ ಮಾಡಿಕೊಂಡರು. ಮನೆ ಮನೆಗೆ ನೀರು ಕೊಡುವ ಜಲ ಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ. ದೇಶ ವೇಗವಾಗಿ ಬೇಳೆಯುತ್ತಿದೆ. ಇದು ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ. ದೇಶದಹಿತದೃಷ್ಟಿಯಿಂದ ನೀವು ತೀರ್ಮಾನ ಮಾಡಬೇಕು. ನಾನು ಸಿಎಂ ಆಗಿದ್ದಾಗ ವಕೀಲರ ಸಮುದಾಯಕ್ಕೆ ಅಗತ್ಯ ಅನುಕೂಲಗಳನ್ನು ಮಾಡಿದ್ದೇನೆ. ಮುಂದೆಯೂ ಅಗತ್ಯ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಂಬಣ್ಣ ಜತ್ತಿ, ಪಿ.ಎಸ್ ಹೆಬ್ಬಾಳ, ಸಿ.ಪಿ ಜಾವಗಲ್ ಹಾಗೂ ಎನ್ ಎಸ್ ಕಾಳೆ ಹಾಜರಿದ್ದರು.
ದೇಶದ ಅಭಿವೃದ್ದಿಯಲ್ಲಿ ಸಾರಿಗೆ ವಲಯದ ಪಾತ್ರ ಮಹತ್ವದ್ದಾಗಿದೆ: ಬಸವರಾಜ ಬೊಮ್ಮಾಯಿ
ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ಮೇಲೆ ದೇಶದ ಅಭಿವೃದ್ಧಿ ವೇಗ ಹೆಚ್ಚಿದೆ. ದೇಶದ ಅಭಿವೃದ್ಧಿ ಯಲ್ಲಿ ಸಾರಿಗೆ ವಲಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಲಾರಿ ಮಾಲೀಕರು, ಗಾರ್ಮೆಂಟ್ ಕಾರ್ಮಿಕರು, ಆಟೊ ರಿಕ್ಷಾ ಸ್ಟ್ಯಾಂಡ್ ಮಾಲಿಕರ ಸಂಘದವರೊಂದಿಗೆ ಮಾತನಾಡಿದರು. ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯಿಂದ ಸಾರಿಗೆ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.ಇದರಿಂದ ದೇಶದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ರಸ್ತೆ ಬದಿಗೆ ಸ್ವಚ್ಚತೆ ಕಾಪಾಡಲು ಡಸ್ಟ್ ಬಿನ್, ಶೌಚಾಲಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ ಎಂದರು. ನನ್ನದೂ ಗಾರ್ಮೆಂಟ್ ಕಾರ್ಖಾನೆ ಇದೆ. ಶಿಗ್ಗಾವಿಯಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ. ಹಾವೇರಿಯನ್ನು ಟೆಕ್ಸ್ ಟೈಲ್ ಹಬ್ ಆಗಿ ಅಭಿವೃದ್ಧಿ ಪಡಿಸಲು ತೀರ್ಮಾನ ಮಾಡಿದ್ದೇನೆ ಎಂದರು.
ಮಹಿಳೆಯರು ದೇಶದ ಆರ್ಥಿಕತೆ ನಿಭಾಯಿಸಲು ಸಮರ್ಥರಿದ್ದಾರೆ: ಬಸವರಾಜ ಬೊಮ್ಮಾಯಿ
ಮಹಿಳೆಯರು ದೇಶದ ಆರ್ಥಿಕತೆ ನಿಭಾಯಿಸಯವಷ್ಟು ಸಮರ್ಥರಿದ್ದಾರೆ. ನಮ್ಮಲ್ಲಿ ಉಳಿತಾಯ ಸಂಸ್ಕೃತಿ ಇದೆ. ನಮ್ಮ ಮಹಿಳೆಯರ ಬಳಿ ಹಣ ಇದ್ದರೆ ಅದನ್ನು ಉಳಿತಾಯ ಮಾಡುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಹಾವೇರಿಯಲ್ಲಿ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳೊಂದಿಗೆ ಮಾತನಾಡಿದರು. ಆರ್ಥಿಕವಾಗಿ ದೇಶವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ನಾಯಕತ್ವಕ್ಕೆ ಮಹತ್ವ ಕೊಡಬೇಕು. ಕೇಲವ ಜನಪ್ರೀಯ ಯೋಜನೆಗಳನ್ನು ನೋಡಿ ಮತ ಹಾಕಿದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.. ಜನರು ದುಡಿದು ಹಣ ಗಳಿಸಿದರೆ ಮಾತ್ರ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಅಮೇರಿಕಾ, ಯುರೋಪ್ ದೇಶಗಳಲ್ಲಿ ಸಾಲ ಮಾಡಿ ಹೆಚ್ಚು ಖರ್ಚು ಮಾಡುವ ವ್ಯವಸ್ಥೆ ಇದೆ. ಅದರಿಂದ ಜನರು ಸಾಲಗಾರರಾಗುವುದ ರಿಂದ ಬ್ಯಾಂಕ್ ಗಳು ದಿವಾಳಿ ಆಗುತ್ತವೆ. ಜನರ ಆದಾಯ ಹೆಚ್ಚಾದರೆ, ದೇಶದ ಆದಾಯ ಹೆಚ್ಚಾಗುತ್ತದೆ. ದುಡಿಯುವ ಜನರ ಕೈಯಲ್ಲಿ ಹೆಚ್ಚು ಹಣ ಇದ್ದರೆ. ಸಂಸ್ಥೆಗಳು ಆರ್ಥಿಕವಾಗಿ ಸಬಲವಾಗುತ್ತವೆ. ದೇಶವೂ ಆರ್ಥಿಕವಾಗಿ ಬಲಿಷ್ಠವಾಗುತ್ತದೆ ಎಂದರು.