ನಮ್ಮದು ವಿಶ್ವದ ಸರ್ವಶ್ರೇಷ್ಠ ಸಂವಿಧಾನ: ಎಂ.ಎ. ಗಫೂರ್
ಉಡುಪಿ: ಬಾಬಾ ಸಾಹೇಬ್ ಅಂಬೇಡ್ಕರ್ ರಿಂದ ರಚನೆಗೊಂಡ ನಮ್ಮ ಸಂವಿಧಾನ ಇಂದು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ವಿಶ್ವದ ರಾಜಕೀಯ ತಜ್ಞರು ಇದನ್ನು ಕೊಂಡಾಡುತ್ತಿದ್ದಾರೆ .ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಘನತೆಯ ಮತ್ತು ಸಮಾನತೆಯ ಬದುಕು ಕಟ್ಟಿಕೊಳ್ಳಲು ಈ ಸಂವಿಧಾನದ ಮೂಲಕ ನೆರವಾಗಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವ ಮಾನ್ಯರಾದ ನ್ಯಾಯಶಾಸ್ತ್ರ ತಜ್ಞರು, ರಾಜಕೀಯ ತಜ್ಞರು ಆಗಿ ನಮ್ಮ ಸಂವಿಧಾನವನ್ನು ರಚನೆ ಮಾಡಿದ್ದರಿಂದ ಭಾರತ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.ಇಂಥ ಸಂವಿಧಾನಕ್ಕೆ ಅಪಾಯ ಬರುವ ಎಲ್ಲಾ ಸಾಧ್ಯತೆಗಳು ನಮ್ಮ ಮುಂದೆ ಇದೆ. ಹಾಗಾಗಿ ಈ ಸಂವಿಧಾನಕ್ಕೆ ಅಪಾಯ ಆಗದಂತೆ ನಾವೆಲ್ಲರೂ ಎಚ್ಚರಿಕೆಯನ್ನು ವಹಿಸಬೇಕು . ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಎಂ.ಎ. ಗಪೂರ್ ರವರು ಇಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಜರುಗಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇ ಜನ್ಮದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಉಡುಪಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ ಅವರು ಸ್ವಾಗತಿಸಿದರು, ಉಡುಪಿನಗರಸಭೆಯ ಮಾಜಿ ಉಪಾಧ್ಯಕ್ಷರಾದ ಸಂಧ್ಯಾ ತಿಲಕರವರು ಧನ್ಯವಾದವಿತ್ತರು. ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ,ಉಡುಪಿ ಡಿಸಿಸಿ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಚಾರ ಸಮಿತಿಯ ಅಧ್ಯಕ್ಷರಾದ ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಮುರುಳಿ ಶೆಟ್ಟಿ ಮಹಾಬಲ ಕುಂದರ್, ದಿವಾಕರ್ ಕುಂದರ್ ಸತೀಶ್ ಮಂಚಿ,ಕಿಶನ್ ಕಸ್ತೂರ್ಬಾ ನಗರ, ಜೇಬಾ ಸೆಲ್ವ, ರವಿರಾಜ್ ಲಕ್ಷ್ಮಿ ನಗರ, ಲಕ್ಷ್ಮಣ್ ಅಂಬಲಪಾಡಿ ಇನ್ನಿತರ ಉಪಸ್ಥಿತರಿದ್ದರು.