ಬ್ರಹ್ಮಾವರ: ಮುದ್ರಾ ಸಾಲ ಯೋಜನೆ ಹೆಸರಿನಲ್ಲಿ ಮಹಿಳೆಗೆ ವಂಚನೆ

ಬ್ರಹ್ಮಾವರ, ಎ.13: ಪ್ರಧಾನ ಮಂತ್ರಿ ಜನಧನ ಮುದ್ರಾ ಸಾಲ ನೀಡಿವುದಾಗಿ ನಂಬಿಸಿ ಮಹಿಳೆಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೋಭಾ(41) ಎಂಬವರಿಗೆ ಎ.8ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಪ್ರಧಾನ ಮಂತ್ರಿ ಜನಧನ ಮುದ್ರಾ ಸಾಲದ ಏಜೆಂಟ್ ಎಂದು ಹೇಳಿ ಕೊಂಡಿದ್ದನು. ಶೇ.2 ಬಡ್ಡಿ ಹಾಗೂ ಶೇ.20 ಸಬ್ಸಿಡಿ ರೂಪದಲ್ಲಿ ಸಾಲ ಕೊಡಿಸುವುದಾಗಿ ತಿಳಿಸಿದ್ದು, ಅದರಂತೆ ಶೋಭಾ ಕೆಲವು ದಾಖಲೆ ಪತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು.

ಅಲ್ಲದೆ ಆ ವ್ಯಕ್ತಿ ತಿಳಿಸಿದಂತೆ ಒಟ್ಟು 88,991ರೂ. ಹಣವನ್ನು ಶೋಭಾ ಆತನ ಖಾತೆಗೆ ಜಮೆ ಮಾಡಿದ್ದರು. ಆದರೆ ಆತ ಪಡೆದ ಹಣವನ್ನು ಮತ್ತು ಸಾಲವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!