ಕಾಲೇಜು ಪ್ರಾರಂಭಕ್ಕೆ ದಿನಾಂಕ ಫಿಕ್ಸ್, ಶಿಫ್ಟ್ ಆಧಾರದಲ್ಲಿ ತರಗತಿ ನಡೆಸಲು ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನವೆಂಬರ್ 17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್  ನಾರಾಯಣ ತಿಳಿಸಿದ್ದಾರೆ.

“ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜು ಪುನಃ ತೆರೆಯಲು ನಿರ್ಧರಿಸಲಾಯಿತು. ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪದವಿ ಕಾಲೇಜುಗಳೆಲ್ಲವೂ ಮತ್ತೆ ಪ್ರಾರಂಭವಾಗಲಿವೆ” ಎಂದು ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ ನಾರಾಯಣ್ ಹೇಳಿದರು.

ಮೊದಲಿಗೆ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಯೂ ಕಲಿಯಬಹುದು ಇಲ್ಲವೇ ಆನ್ ಲೈನ್ ತರಗತಿಗೂ ಹಾಜರಾಗಬಹುದು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತರಗತಿಗಳಲ್ಲಿ ಎಲ್ಲಾ ಬಗೆಯ ಸುರಕ್ಷಿತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಹೇಳಿದ್ದಾರೆ.

“ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು, ಕಾಲೇಜುಗಳಿಗೆ ಬರುವ ಮೂಲಕ ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಅವರ ಪೋಷಕರ ಒಪ್ಪಿಗೆ ಹೊಂದಿರಬೇಕು.ವಿದ್ಯಾರ್ಥಿಗಳ ಸಂಖ್ಯೆಯನ್ನು ಅವಲಂಬಿಸಿ- ತರಗತಿಗಳು ಹೇಗೆ ನಡೆಯಬೇಕು, ಎಷ್ಟು ಬ್ಯಾಚ್‌ಗಳಲ್ಲಿ- ಎಲ್ಲವನ್ನೂ ನಿರ್ಧರಿಸಲಾಗುತ್ತದೆ.”

ಹಾಸ್ಟೆಲ್ ಗಳಲ್ಲಿ ಸಹ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಶಿಫ್ಟ್ ಹಾಗೂ ಬ್ಯಾಚ್ ಆಧಾರದಲ್ಲಿ ತರಗತಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧ್ಯಕ್ಷತೆಯ ಸಭೆಯಲ್ಲಿ ಪದವಿ ಕಾಲೇಜುತರಗತಿಗಳನ್ನು ಪ್ರಾರಂಭಿಸುವ ಬಗ್ಗೆ  ಚರ್ಚಿಸಲಾಗಿದ್ದು ಸಭೆಯಲ್ಲಿ  ಸಿ ಎನ್ ಅಶ್ವತ್ ನಾರಾಯಣ್ ಅವರೊಂದಿಗೆ ಗೆ ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಹಣಕಾಸು, ಸಾರಿಗೆ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!