ಉದ್ಯಾವರ; ಪದ್ಮಾಸಿನಿಗೆ ಮೂರು ಚಿನ್ನದ ಪದಕ
ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿಯ ಉದ್ಯಾವರ ನಿವಾಸಿ ಪದ್ಮಾಸಿನಿ ಅವರು ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜಾನಪದ ವಿಭಾಗದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ..
19ರಂದು ನಡೆದ ಮೈಸೂರು ವಿಶ್ವವಿದ್ಯಾಲಯದ 100ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಪದ್ಮಾಸಿನಿ ಅವರಿಗೆ ವಿವಿಯು ಚಿನ್ನದ ಪದಕಗಳನ್ನು ಪ್ರದಾನ ಮಾಡಿದೆ.
ತಮ್ಮ ಕಾಲೇಜು ವಿದ್ಯಾಭ್ಯಾಸದೊಂದಿಗೆ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಈಕೆ, ಇಂದಿಗೂ ಉತ್ತಮ ರಂಗ ನಟಿ. ಅದರೊಂದಿಗೆ ಯಕ್ಷಗಾನ, ಭರತನಾಟ್ಯವನ್ನು ಕಲಿತ್ತಿದ್ದು ಈಗ ಪ್ರಸ್ತುತ ಒಡಿಸ್ಸಿ ನೃತ್ಯಾಭ್ಯಾಸವನ್ನು ಸೌಮ್ಯ ರಂಗಸ್ವಾಮಿಯವರಲ್ಲಿ ಮಾಡುತ್ತಿದ್ದಾರೆ
ಇವರು ಪ್ರಸ್ತುತ ಶಿರ್ವ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.