ಪುಣ್ಯಕೋಟಿ ಗೋ ಸೇವಾ ಬಳಗ ಕುಕ್ಕಿಕಟ್ಟೆ- ಗೋಪೂಜೆ

ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗ ಕುಕ್ಕಿಕಟ್ಟೆ ಇದರ 85ನೇ ತಿಂಗಳ ಗೋಪೂಜೆ ಇಂದು ಮಾರ್ಪಳ್ಳಿ ಗೆಳೆಯರ ಬಳಗದ ಸಮೀಪದಲ್ಲಿರುವ ಸುಮತಿ ಶೇರಿಗಾರ್ ಇವರ ಮನೆಯಲ್ಲಿ ನಡೆಯಿತು.

ಪುಣ್ಯಕೋಟಿ ಗೋಸೇವಾ ಬಳಗದ ಪ್ರಮುಖರಾದ ಜ್ಯೋತಿ ಎಸ್ ದೇವಾಡಿಗ, ತಾರಾ ಉಮೇಶ್ ಆಚಾರ್ಯ, ಅನುರಾಧಾ ಉದಯ್ ಹಾಗೂ ಪುಷ್ಪಾವತಿ ಉಪಸ್ಥಿತರಿದ್ದರು.

ಹಿರಿಯರಾದ ಸುಮತಿ ಶೇರಿಗಾರ್, ಗೋಸೇವಾ ಬಳಗದ ಸದಸ್ಯರು, ಮಾರ್ಪಳ್ಳಿ ಗೆಳೆಯರ ಬಳಗ ಪರಿಸರದ ಮಹಿಳೆಯರು, ಮಕ್ಕಳು ಶೋಭಾನೆ ಹಾಡುವ ಮುಖಾಂತರ ಗೋವುಗಳಿಗೆ ನವಧಾನ್ಯ, ಅವಲಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ನೀಡಿ ಆರತಿಯನ್ನು ಬೆಳಗಿಸಿ ಗೋಪೂಜೆಯನ್ನು ಮಾಡಿ ಸಂಭ್ರಮಿಸಿದರು.

ಬಳಗದ ವತಿಯಿಂದ ಗೋವು ಪಾಲಕರಿಗೆ, ಗೋಕಾಣಿಕೆ ಹಾಗೂ ಗೋವುಗಳಿಗೆ ಹಿಂಡಿಯನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!