ಉಡುಪಿ: ಕೆಟಿಎಂ ಡೀಲರ್ ಸಂಸ್ಥೆಯ ಮ್ಯಾನೇಜರ್‌ನಿಂದ 18 ಲಕ್ಷ ರೂ. ವಂಚನೆ
ಉಡುಪಿ: ಕೆಟಿಎಂ ಬೈಕ್‌ಗಳ ಡೀಲರ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ಕೊಂಡು ವಂಚಿಸಿರುವ ಬಗ್ಗೆ ವರದಿಯಾಗಿದೆ.
ಗುಂಡಿಬೈಲುನಲ್ಲಿರುವ ಕೆಟಿಎಂ ಬೈಕ್‌ಗಳ ಅಧಿಕೃತ ಡೀಲರ್ ಸಂಸ್ಥೆ ಸಾನ್ವಿ ಟೇಡರ್ಸ್‌ನ ಮಾರಾಟ ವಿಭಾಗದ ಮ್ಯಾನೇಜರ್ ರೋಶನ್ ಕಳೆದ ತಿಂಗಳಿನಲ್ಲಿ ಕೆಲಸಕ್ಕೆ ಬಾರದೆ ಅನಾರೋಗ್ಯ ಕಾರಣವನ್ನು ಹೇಳಿ ಗೈರು ಹಾಜರಾಗುತ್ತಿದ್ದರು. ಈತ ಕೆಲಸಕ್ಕೆ ಬಾರದೆ, ಫೋನ್ ಸಂಪರ್ಕಕ್ಕೆ ಸಿಗದಿರುವ ಕಾರಣ ಅನುಮಾನಗೊಂಡು ಸಂಸ್ಥೆಯ ಮ್ಯಾನೇಜರ್ ಶರತ್ ಟಿ. ಮಾರಾಟದ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದರು.
ಆಗ ರೋಶನ್ ಜ.3ರಿಂದ ಮಾ.13ರವರೆಗೆ 18,14,750 ರೂ. ಹಣವನ್ನು ಗ್ರಾಹಕರಿಂದ ತನ್ನ ಸ್ವಂತ ಖಾತೆಗೆ ವರ್ಗಾಯಿಸಿ ದುರುಪಯೋಗ ಪಡಿಸಿಕೊಂಡು ಸಂಸ್ಥೆಗೆ ವಂಚನೆ ಎಸಗಿರುವುದು ಕಂಡುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.