ಉಡುಪಿ: ಏ.10 “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್‌”ನ ನವಿಕೃತ ಮಳಿಗೆ ಉದ್ಘಾಟನೆ

ಉಡುಪಿ ಎ.6(ಉಡುಪಿ ಟೈಮ್ಸ್ ವರದಿ): ನಗರದ ಕೆ.ಎಂ ಮಾರ್ಗದ ಸೂಪರ್ ಬಜಾರ್‌ನಲ್ಲಿರುವ ಪ್ರಸಿದ್ಧ ಗೃಹೋಪಕರಣಗಳ ಮಳಿಗೆ “ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್‌“ನ ನವಿಕೃತ ವಿಶಾಲವಾದ ಮಳಿಗೆಯ ಉದ್ಘಾಟನಾ ಸಮಾರಂಭ ಏಪ್ರಿಲ್ 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.

ಈ ನವೀಕೃತ ಗೃಹೋಪಕರಣಗಳ ಮಳಿಗೆಯನ್ನು ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಜೆರಿ ವಿನ್ಸೆಂಟ್ ಡಯಾಸ್ ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ಶುಭ ಸಮಾರಂಭದಲ್ಲಿ ಉಡುಪಿಯ ಶೋಕಮಾತ ಚರ್ಚ್‌‌ನ ಧರ್ಮಗುರು ವಂ.ರೆ.ಫಾ. ಚಾರ್ಲ್ಸ್ ಮಿನೇಜಸ್, ಬೆಳ್ಮಣ್‌ ಸೈಂಟ್ ಜೋಸೆಫ್ ದೇವಾಲಯದ ಧರ್ಮಗುರು ರೆ.ಫಾ.ಫೆಡ್ರಿಕ್ ಮಸ್ಕರೇನಸ್, ಕಲ್ಯಾಣಪುರ ಕ್ಯಾಥೆದ್ರಲ್ ದೇವಾಲಯದ ಧರ್ಮಗುರು ರೆ.ಫಾ.ಡಾ. ವಲೇರಿಯನ್ ಮೆಂಡೋನ್ಸಾ, ಶಿರ್ವಾ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್‌ನ ಧರ್ಮಗುರು ರೆ. ಫಾ.ಲೆಸ್ಲಿ ಕ್ಲಿಫೆರ್ಡ್ ಡಿಸೋಜಾ, ಅತ್ತೂರು ಸೈಂಟ್ ಲಾರೆನ್ಸ್ ಮೈನರ್ ಬೆಸಿಲಿಕಾ ದೇವಾಲಯದ ಧರ್ಮಗುರು ವಂ.ರೆ.ಫಾ.ಆಲ್ಬನ್ ಡಿಸೋಜ, ಸಂತೆಕಟ್ಟೆ ಮೌಂಟ್ ರೋಸರಿ ಕ್ಯಾಥೋಲಿಕ್ ದೇವಾಲಯದ ಧರ್ಮಗುರು ರೆ.ಫಾ.ಡಾ.ರೊಕ್ ಡಿಸೋಜಾ, ಕನ್ನರ್ಪಾಡಿಯ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಿನ್ಸಿಪಾಲ್ ಫಾ.ಜಾನ್ಸನ್ ಸಿಕ್ವೇರಾ ಅವರು ಆಶಿರ್ವಚನ ನೀಡಲಿದ್ದಾರೆ.

ಈ ವೇಳೆ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್‌ನ ಮೋಲಿ ಡಯಾಸ್ ಅವರು ಗ್ಲೆನ್ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ. ಉಡುಪಿಯ ವಾಣಿಜ್ಯೋದ್ಯಮಿ ಶಾರಿಕಾ ಆರ್.ಶೆಟ್ಟಿ ಅವರು ಹೋಂ ಅಪ್ಲೈಸಸ್‌ನ್ನು ಉದ್ಘಾಟಿಸಲಿದ್ದಾರೆ. ರೆಫ್ರಿಜಿರೇಷನ್ ವಿಭಾಗವನ್ನು ಲಯನ್ಸ್ ಜಿಲ್ಲಾ ಮೊದಲ ಉಪಾಧ್ಯಕ್ಷ ಗವರ್ನರ್ ಎಂ ಜಿ ಎಫ್ ಲಯನ್ ಮೊಹಮ್ಮದ್ ಹನೀಫ್ ಅವರು ಉದ್ಘಾಟಿಸಲಿದ್ದಾರೆ. ಫರ್ನಿಚರ್ ವಿಭಾಗವನ್ನು ಸಾಯಿರಾಧ ಗ್ರೂಪ್ನ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಟಿವಿ ವಿಭಾಗವನ್ನು ಲಕ್ಷ್ಮೀ ಡೆವಲಪರ್ಸ್ & ಲಕ್ಷ್ಮಿ ಎಲೆಕ್ಟ್ರಿಕಲ್ಸ್‌ನ ಮಾಲೀಕರಾದ ರಾಜಗೋಪಾಲ್ ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ.

ಎಲೆಕ್ಟ್ರಾನಿಕ್ಸ್ ಕಾಂಪ್ಲೆಕ್ಸ್ ನಲ್ಲಿ ವಿವಿಧ ಬ್ರಾಂಡ್‌ಗಳ ಪ್ರಿಡ್ಜ್, ವಾಶಿಂಗ್ ಮೆಷಿನ್, ಟಿವಿ, ಹಾಗೂ ಫರ್ನಿಚರ್ ಸೇರಿದಂತೆ ಗೃಹಬಳಕೆಯ ಎಲ್ಲಾ ಉಪಕರಣಗಳು ಒಂದೇ ಸೂರಿನಡಿ ದೊರೆಯಲಿದೆ.

Leave a Reply

Your email address will not be published. Required fields are marked *

error: Content is protected !!