ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಎಲ್ಲಾ ಪೊಲೀಸರಿಗೆ ಕೊರೋನಾ ಸೋಂಕು ಇದೆಯೇ ಎಂದು ಪರೀಕ್ಷಿಸುತ್ತಿದ್ದು, ಅದರಂತೆ ಈ ಮಹಿಳಾ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪರೀಕ್ಷಿಸಿದ ಸಂದರ್ಭ ಸೋಂಕು ದೃಢಗೊಂಡ ವರದಿ ಬಂದಿದೆ.
ಇದೊಂದು ಕೊರೊನಾ ಶಂಕಿತ ಪ್ರಕರಣವಾಗಿದೆ, ಈ ಸಿಬ್ಬಂದಿ ಠಾಣೆಯ ಹೊರಗೆ ಕರ್ತವ್ಯ ನಿರ್ವಹಿಸದ ಕಾರಣ ಮತ್ತು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಸೋಮವಾರ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಈ ವರದಿ ನಾಳೆ ಸಂಜೆ ಕೈ ಸೇರುವ ನಿರೀಕ್ಷೆ ಇದೆ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆದುದರಿಂದ ನಾಳೆ ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುವುದು. ವರದಿ ನೆಗೆಟಿವ್ ಬಂದರೆ ಸಂಜೆಯ ಬಳಿಕ ಠಾಣೆಯ ಮತ್ತೆ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ. ಇದೊಂದು ಬಹುತೇಕ ತಪ್ಪು ಪಾಸಿಟಿವ್ ಪ್ರಕರಣವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ಸೀಲ್‌ಡೌನ್ ಆಗಲಿ, ಇತರ ಪ್ರಕ್ರಿಯೆಯನ್ನಾಗಲಿ ಮಾಡಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.