ಉಡುಪಿ ಪೊಲೀಸರ ಮತ್ತೊಂದು ಬೇಟೆ, ಇರಾನಿ ಗ್ಯಾಂಗ್ ನ ನಾಲ್ವರ ಬಂಧನ
ಉಡುಪಿ: (ಉಡುಪಿಟೈಮ್ಸ್ ವರದಿ)ಪೊಲೀಸ್ ಎಂದು ಹೇಳಿ ನಂಬಿಸಿ ವೃದ್ದರನ್ನು ವಂಚಿಸುತ್ತಿದ್ದ ನಾಲ್ವರು ಇರಾನಿ ಗ್ಯಾಂಗ್ ನ ವಂಚಕರನ್ನು ಉಡುಪಿ ಪೊಲೀಸರು ಬಂಧಿಸಿರುತ್ತಾರೆ.
ಈ ವಂಚಕರು ದೆಹಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು , ಗಂಡಸರು ನಡೆದುಕೊಂಡು ಹೋಗುವಾಗ ಅವರಿಗೆ ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಚಿನ್ನಾಭರಣವನ್ನು ಮೋಸದಿಂದ ತೆಗೆದುಕೊಂಡು ಪರಾರಿಯಾಗುತ್ತಿದ್ದರು.
ಬಂಧಿತ ಆರೋಪಿಗಳು ಜಾಕೀರ್ ಹುಸೇನ್ ( 26), ತಂದೆ: ಯೂಸು s
ಖಾನ್, ವಾಸ: ಸಿರ್ಸಾಸ್ತ ಆಸ್ಪತ್ರೆಯ ಹಿಂಬದಿ, ಇರಾನಿ ಮೊಹಲಾ , ವಾರ್ಡ್ ನಂಬ್ರ ೦೧, ಶ್ರೀರಾಮಪುರ, ಅಹ್ಮದ್ನಗರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ( 2) ಕಂಬರ್ ರಹೀಂ ಮಿರ್ಜಾ, (32 ), ತಂದೆ: ದಿ|ರಹೀಂ ಮಿರ್ಜಾ, ವಾಸ: ಮದರ್ ತೆರೆಸಾ ಸರ್ಕಲ್, ಕಾಲೇಜ್ ರೋಡ್, ವಾರ್ಡ್ ನಂಬ್ರ ೦೧, ಶ್ರೀರಾಮಪುರ, ಅಹ್ಮದ್ನಗರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ (3) ಅಕ್ಷಯ್ ಸಂಜಯ್ ಗೋಸಾವಿ,( 22)ತಂದೆ: ಸಂಜಯ್ ಗೋಸಾವಿ, ವಾಸ: ಲಕ್ಷ್ಮಿ ನಿವಾಸ, ಸೂಟ್ಗಿರಾನಿ ರೋಡ್, ಸಂಜಯ್ ನಗರ, ವಾರ್ಡ್ ನಂಬ್ರ ೦೨, ಶ್ರೀರಾಮಪುರ, ಅಹ್ಮದ್ನಗರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ (4) ಶಾಹರುಖ್ ಬಂದೆನವಾಜ್ ಶೇಖ್, (24 ), ತಂದೆ: ಬಂದೆನವಾಜ್ ಶೇಖ್, ವಾಸ: ಪೊಲೀಸ್ ಲೈನ್ ಮಾರ್ಗ, ಸೈನಿಕ್ ನಗರ, ವಾರ್ಡ್ ನಂಬ್ರ ೦೮, ಶ್ರೀರಾಮಪುರ ತಾಲೂಕು, ಅಹ್ಮದ್ನಗರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ ಎಂಬುವರನ್ನು ದಸ್ತಗಿರಿ ಮಾಡಿರುತ್ತಾರೆ.
ತನಿಖೆ ವೇಳೆ ಇವರು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ -1, ಕುಂದಾಪುರ -1, ವಿಜಯಪುರದಲ್ಲಿ 4, ಚಿಕ್ಕಮಗಳೂರುನಲ್ಲಿ 1, ಬಂಟ್ವಾಳ-, ಮಂಗಳೂರು ಉರ್ವಾ-1 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿರುತ್ತದೆ.
ಇನ್ನೂ ಹಲವಾರು ಕಡೆ ಇದೇ ರೀತಿ ಕೃತ್ಯಗಳನ್ನು ನಡೆಸಿರುತ್ತಾರೆ. ಆರೋಪಿಗಳನ್ನು ದಸ್ತಗಿರಿ ಮಾಡಿದ ವೇಳೆ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಯಥಾಸಿತಿಯಲ್ಲಿ ಆರೋಪಿಗಳಲ್ಲಿದು, ಕೃತ್ಯಕ್ಕೆ ಬಳಸಿದ ಚಾವರ್ಲೆಟ್ ಬೀಟ್ ಕಾರು ಮತು ಹೊಂಡಾ ಶೈನ್ ಬೈಕ್ ಹಾಗೂ 2 ಹೆಲ್ಮೆಟ್ ಮತ್ತು ನಗದು 5100 ರೂಪಾಯಿಗಳನ್ನು ಸ್ವಾದೀ ನಪಡಿಸಿಕೊಳ್ಳಲಾಗಿದೆ. ಇವರು ಮೋಸ ಮಾಡಿ ತೆಗೆದುಕೊಂಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್ಪುರ ಎಂಬಲ್ಲಿನ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನವನ್ನು ಸಾ ಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಸಾ ಧೀನಪಡಿಸಿಕೊಂಡ ಸ್ವತು ಗಳ ಒಟ್ಟು ಮೌಲ್ಯ7 ಲಕ್ಷ ರೂಪಾಯಿ ಆಗಬಹುದು.
ಕಾರ್ಯಾಚರಣೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್, ರವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ರವರ ಮಾರ್ಗದರ್ಶನದಲ್ಲಿ. ಉಡುಪಿ ನಗರ ವ್ಯತೆದ ಸಿಪಿಐ ಮಂಜುನಾಥ್, ಡಿಸಿಬಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಡಿಆರ್ ಮತ್ತು ಅವರ ಸಿಬ್ಬಂದಿಯವರು ಹಾಗೂ ಉಡುಪಿ ನಗರ ಠಾಣೆಯ ಪಿಎಸ್ಐಗಳಾದ ಸಕ್ತಿವೇಲು, ಮತ್ತು ಕುಂದಾಪುರ ಠಾಣಾ ಪಿಎಸ್ಐ ಸದಾಶಿವ ಗವರಕ್ಕೆ ಸಿಬ್ಬಂದಿಯವರಾದ ಎ.ಎಸ್.ಐ ಸುಧಾಕರ, ಲೋಕೇಶ್, ಅಹ್ಮದ್ , ಮಂಜುನಾಥ್ , ಸಂತೋಷ್ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.