ಜಯ ಸಿ ಸುವರ್ಣರು ಬಿಟ್ಟು ಹೋದ ಆದರ್ಶಗಳನ್ನು ಕಟ್ಟಿ ಬೆಳೆಸೋಣ: ಕೋಟ ಶ್ರೀನಿವಾಸ
ಮಂಗಳೂರು: ಭಾರತ್ ಬ್ಯಾಂಕ್ ಸ್ಥಾಪಕ ಜಯ ಸಿ ಸುವರ್ಣ (75ವರ್ಷ) ಅಗಲಿಕೆಯು ಸಮಾಜಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಬ್ರಹ್ಮಶ್ರೀ ನಾರಾಯಣ ಗುರುಗಳು ಸುವರ್ಣರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರು ಬಿಟ್ಟು ಹೋದ ಆದರ್ಶಗಳನ್ನು ಕಟ್ಟಿ ಬೆಳೆಸೋಣ ಎಂದು ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದರು. ಕರಾವಳಿ ಜಿಲ್ಲೆಯಿಂದ ಮೇಲೆದ್ದು ಬಂದ ಎಳೆಯನೊಬ್ಬ, ಮುಂಬೈ ಸೇರಿ ಬದುಕು ಕಟ್ಟಿಕೊಳ್ಳುತ್ತಾ, ಮಾಯಾನಗರಿ ಮುಂಬೈಯ ಒಡಲೊಳಗೆ ಸಹಸ್ರಾರು ಕರಾವಳಿಯ ಬಡವರನ್ನು ಸೆಳೆದು, ಅವರಿಗೆ ಅಲ್ಲಿ ಬದುಕು ರೂಪಿಸಿಕೊಟ್ಟವರು ಜಯ ಸಿ ಸುವರ್ಣ. ಅನಕ್ಷರಸ್ಥ ಸಮುದಾಯದ ಮೂಲಕ ಭಾರತ್ ಬ್ಯಾಂಕ್ ಅನ್ನುವ ಬೃಹತ್ ಬ್ಯಾಂಕ್ ನಿರ್ಮಿಸಿ ಸಹಸ್ರಾರು ಜನರಿಗೆ ಉದ್ಯೋಗ, ಲಕ್ಷಾಂತರ ಜನರಿಗೆ ಅವಕಾಶ, ಇವೆಲ್ಲವನ್ನು ಒಬ್ಬ ವ್ಯಕ್ತಿಯಿಂದ ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಜಯ ಸಿ ಸುವರ್ಣರು ಎತ್ತರದ ಮನುಷ್ಯರಾಗಿ ರೂಪುಗೊಂಡಿದ್ದರು. ಕಾಪು: ಬಿಲ್ಲವ ಸಮಾಜವನ್ನು ಅತಿ ಎತ್ತರದ ಸ್ಥಾನಮಾನಕ್ಕೆ ಕೊಂಡೊಯ್ದು ತನ್ನ ಸಮಾಜ ತನ್ನ ಕಾಲ ಮೇಲೆ ನಿಂತು ಬದುಕಬೇಕೆನ್ನುವ ಉದ್ದೇಶದಿಂದ ಭಾರತ್ ಬ್ಯಾಂಕನ್ನು ಸ್ಥಾಪಿಸಿ. ಬಿಲ್ಲವ ಸಮಾಜದ ಭೀಷ್ಮ ಎಂದೇ ಪ್ರಸಿದ್ಧರಾದ, ಬಿಲ್ಲವ ಮಹಾಮಂಡಲ ಇದರ ದೀರ್ಘ ಅವಧಿ ಅಧ್ಯಕ್ಷರಾಗಿದ್ದ. ಅಲ್ಲದೆ ಮುಂಬೈಯಲ್ಲಿ ಬಿಲ್ಲವ ಭವನ ಸ್ಥಾಪಿಸಲು ಕಾರಣಕರ್ತರಾದ ಮಹಾನ್ ಚೇತನ ಜಯ.ಸಿ ಸುವರ್ಣ ಮುಂಬೈ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ ಮಾಜಿ ಸಚಿವ, ಕಾಪು ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ. |