ಕೊರೋನಾ ಸಂಕಷ್ಟದಿಂದ ಛಾಯಾಗ್ರಹಣ ಕ್ಷೇತ್ರ ಬಡವಾಗಿದೆ: ನವೀನ್ ಬಲ್ಲಾಳ್
ಕರೋನ ಮಹಾಮಾರಿಯಿಂದಾಗಿ ಛಾಯಾಗ್ರಹಣ ಕ್ಷೇತ್ರ ಬಡವಾಗಿದೆ. ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲವಾದುದರಿಂದ ಛಾಯಾಗ್ರಹಣವನ್ನೇ ಅವಲಂಬಿಸಿರುವ ಛಾಯಾಗ್ರಾಹಕರು ಕಂಗಾಲಾಗಿದ್ದಾರೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಛಾಯಾಗ್ರಾಹಕರ ಬದುಕು ಹಸನಾಗುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಖ್ಯಾತ ಛಾಯಾಚಿತ್ರಗ್ರಾಹಕ ಲಯನ್ ನವೀನ್ ಬಲ್ಲಾಳ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ಉಡುಪಿ ವಲಯದ ಸರ್ವ ಸದಸ್ಯರಿಗೆ ಶಾಸಕ ಕೆ. ರಘುಪತಿ ಭಟ್ ಕೊಡಮಾಡಿದ ನಾಲ್ಕನೇ ಹಂತದ ಅಗತ್ಯ ದಿನಸಿ ಕಿಟ್ ಹಾಗೂ ಉದ್ಯಾವರದ ಜಯಲಕ್ಷ್ಮಿ ಸಿಲ್ಕ್ ನವರ ಮಾಸ್ಕ್ ಗಳನ್ನು ವಿತರಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಾತೃ ಸಂಸ್ಥೆ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಉಡುಪಿ ವಲಯಾಧ್ಯಕ್ಶ ಪ್ರಕಾಶ್ ಕೊಡಂಕೂರ್, ಪ್ರದಾನ ಕಾರ್ಯದರ್ಶಿ ಸುಕೇಶ್ ಅಮೀನ್, ಮಾತೃ ಸಂಸ್ಥೆ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ರಾಘವೇಂದ್ರ ಕೊಡಂಗಳ ಸಂತೋಷ್ ಪಂದುಬೆಟ್ಟು ಉಪಸ್ಥಿತರಿದ್ದರು.