ಕಾರ್ಕಳ: ಕಾರು ಢಿಕ್ಕಿ- ಸ್ಕೂಟರ್ ಸವಾರ ಮೃತ್ಯು
ಕಾರ್ಕಳ : ಕಾರೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಳಿ ಮಾ.28 ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಸ್ಕೂಟರ್ ಸವಾರ ಮುದ್ದು ಎಂದು ಗುರುತಿಸಲಾಗಿದೆ. ಬಂಗ್ಲೆಗುಡ್ಡೆಯಿಂದ ಜೋಡುರಸ್ತೆ ಕಡೆಗೆ ಹೋಗುತ್ತಿದ್ದ ಸ್ಕೂಟರ್, ಡಿವೈಡರ್ ಬಳಿ ಯೂಟರ್ನ್ ಮಾಡಲು ನಿಲ್ಲಿಸಿದ್ದು, ಆಗ ಜೋಡುರಸ್ತೆ ಕಡೆಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ಕಡೆಗೆ ಬರುತ್ತಿದ್ದ ಕಾರು, ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸ್ಕೂಟರ್ಗೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಮುದ್ದು ಗಂಭೀರ ಗಾಯಗೊಂಡು ಕಾರ್ಕಳ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.