ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ: ವಿಶ್ವ ರಂಗಭೂಮಿ ದಿನಾಚರಣೆ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಮಂಗಳವಾರ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ಈ ಪ್ರಯುಕ್ತ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳಾದ ಪ್ರೊ.ಆರ್.ಎಲ್.ಭಟ್ ಉಡುಪಿ (ನಾಟಕ ಸಾಹಿತ್ಯ), ಕೆ.ವಿ.ರಾಘವೇಂದ್ರ ಐತಾಳ್, ಮುಂಬೈ(ರಂಗ ನಿರ್ದೇಶಕರು), ಕಜೆ ರಾಮಚಂದ್ರ ಭಟ್ (ರಂಗ ಸಂಘಟಕರು) ಎಸ್.ವಿ. ರಮೇಶ್ ಬೇಗಾರ್ (ರಂಗ ಸಂಘಟಕರು ಹಾಗೂ ನಿರ್ದೇಶಕರು), ಸುಜಾತ ಶೆಟ್ಟಿ (ರಂಗ ನಟಿ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ-2024′ ಪ್ರದಾನ ಮಾಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿ ವರದರಾಯ ಫೈ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಲಾಪೋಷಕರಾದ ವಿ.ಜಿ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮುಖ್ಯಸ್ಥರಾದ ಪುರಂದರ ತಿಂಗಳಾಯ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಸಂಚಾಲಕ ರವಿರಾಜ್ ಎಚ್.ಪಿ ನೆರವೇರಿಸಿ, ಪುರಸ್ಕೃತರ ಪರಿಚಯವನ್ನು ರಾಘವೇಂದ್ರ ಪ್ರಭು ಕರ್ವಾಲು, ರಂಜಿನಿ ವಸಂತ್, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ ಹಾಗೂ ವಿದ್ಯಾ ಶಾಮಸುಂದರ್ ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣಿೈ ನೆರವೇರಿಸಿ , ಧನ್ಯವಾದವನ್ನು ರಾಜೇಶ್ ಭಟ್ ಪಣಿಯಾಡಿ ನೀಡಿದರು.
ಪ್ರಾರಂಭದಲ್ಲಿ ಗಾಯಕಿ ಅಖಿಲ ಹೆಗಡೆ ಹೊನ್ನಾವರ ಇವರಿಂದ ರಂಗಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.