ಜೆಇಇ ಮೈನ್ ಆರ್ಕಿಟೆಕ್ಚರ್- ಜ್ಞಾನಸುಧಾದ ಕೇದಾರ್ ರಮೇಶ್ ಕುಲಕರ್ಣಿ ರಾಜ್ಯಕ್ಕೆ ಪ್ರಥಮ
ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ. ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್- 2024 ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ರಾಜ್ಯವಾರು ಟಾಪರ್ ಪಟ್ಟಿಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೇದಾರ್ ರಮೇಶ್ ಕುಲಕರ್ಣಿ 99. 9670351 ಪರ್ಸಂಟೈಲ್ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈತ ಬಾಗಲಕೋಟೆಯ ರಮೇಶ್ ವಿ. ಕುಲಕರ್ಣಿ ಮತ್ತು ಗೀತಾ ಆರ್. ಕುಲಕರ್ಣಿಯವರ ಪುತ್ರ.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಕೇದಾರ್ ಸಾಧನೆಯನ್ನು ಕೊಂಡಾಡಿ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಕಾಲೇಜು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ಸ್ ಮಿಥುನ್ ಯು. ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಈಗಾಗಲೇ ಪ್ರಕಟಗೊಂಡ ಜೆ.ಇ.ಇ. ಮೈನ್ ಬಿ.ಆರ್ಕ್-2024ರ ಫಲಿತಾಂಶದಲ್ಲಿ ಜ್ಞಾನಸುಧಾದದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ ಜೆ.ಇ.ಇ. ಮೈನ್ ಬಿ.ಟೆಕ್ನಲ್ಲಿ 7 ಮಂದಿ 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.