ಮಂಗಳೂರು: ಭೀಕರ ಅಪಘಾತ- ಬಿಜೆಪಿ ಮುಖಂಡೆಯ ಮೊಮ್ಮಗ ಮೃತ್ಯು
ಮಂಗಳೂರು: ನಗರದ ನಂತೂರು ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವನೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಬಿಜೆಪಿ ನಾಯಕಿ ತೊಕ್ಕೊಟ್ಟಿನ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ (30) ಮೃತರಾದವರು.
ಸ್ನೇಹಿತನ ಮನೆಯಲ್ಲಿ ದೈವದ ನೇಮಕ್ಕೆ ಹೋಗಿ ಮರಳುವಾಗ ದುರ್ಘಟನೆ ನಡೆದಿದೆ. ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ನಂತೂರಿನ ಬಳಿ ಕಾರು ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿಯಾಗಿದೆ. ತೀವ್ರ ಗಾಯಗಳಿಂದಾಗಿ ಶಮಿತ್ ಶೆಟ್ಟಿ ಮೃತಪಟ್ಟಿದ್ದಾರೆ.