ಭೂತಾನ್ ಸರ್ವೋಚ್ಚ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ
ಥಿಂಪು: ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಟೋ’ ನೀಡಿ, ಗೌರವಿಸಿದೆ. ಈ ಮೂಲದ ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೊದಲ ವಿದೇಶಿಗರೆಂಬ ಖ್ಯಾತಿಗೂ ಮೋದಿ ಪಾತ್ರರಾಗಿದ್ದಾರೆ.
ಎರಡು ದಿನಗಳ ಭೂತಾನ್ ಪ್ರವಾಸ ಕೈಗೊಂಡಿರುವ ಮೋದಿಗೆ ಮೊದಲ ದಿನವೇ ಭೂತಾನ್ನಲ್ಲಿ ಅದ್ದೂರಿ ಸ್ವಾಗತ ದೊರೆತಿದೆ. ಭಾರತ-ಭೂತಾನ್ ನಡುವಿನ ಬಾಂಧವ್ಯ ವೃದ್ಧಿಸುವಲ್ಲಿ ಮೋದಿ ಅವರ ಪಾತ್ರ ಮತ್ತು ಅವರ ಪ್ರಜಾ ಕೇಂದ್ರಿತ ಆಡಳಿತವನ್ನು ಶ್ಲಾಘಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 140 ಕೋಟಿ ಭಾರತೀಯರಿಗೆ ಈ ಗೌರವ ಸಮರ್ಪಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.