ಕಾರ್ಕಳ: ಅಕ್ರಮ ಮರಳು ಸಾಗಾಟ 3 ಟಿಪ್ಪರ್ ವಶ
ಕಾರ್ಕಳ, ಮಾ.22: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ಬೋಳ ಗ್ರಾಮದ ಬರಬೈಲು ಎಂಬಲ್ಲಿ ಚೆಕ್ಪೋಸ್ಟ್ ನಲ್ಲಿ ಮಾ.22ರಂದು ಬೆಳಗ್ಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಡೆನಿಲ್, ಆನಂದ, ಪರಸಪ್ಪ, ನಿತಿನ್ ಬೆಳ್ವೆ, ನಿತಿನ್ ಭೈರಂಜೆ, ಆತ್ರಾಡಿ ದಿಲೀಪ್ ಎಂಬವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಸಚ್ಚರಿಪೇಟೆ ಕಡೆಯಿಂದ ಕೆದಿಂಜೆ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.