ಕಟಪಾಡಿ: ಮಹಿಳೆಗೆ ಆನ್ಲೈನ್ನಲ್ಲಿ 99 ಸಾವಿರ ರೂ.ವಂಚನೆ
ಕಾಪು: ಮಹಿಳೆಯರ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡುವ ಮೂಲಕ ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟಪಾಡಿಯ ಶ್ರೇಯಾ(40) ಎಂಬವರ ಖಾತೆಗೆ ಸಂಬಳದ ಹಣ ಜಮಾವಣೆಯಾಗಿದ್ದು, ಬಳಿಕ ಅವರ ಗಮನಕ್ಕೆ ಬಾರದೇ ಖಾತೆಯಿಂದ 99,000ರೂ. ಹಣ ಡ್ರಾ ಆಗಿತ್ತು. ಅಪರಿಚಿತ ವ್ಯಕ್ತಿ ಶ್ರೇಯಾ ಅವರಿಗೆ ತಿಳಿಯದೇ ಅವರ ಖಾತೆಯ ವಿವರವನ್ನು ಪಡೆದುಕೊಂಡು ಖಾತೆಯಿಂದ ಆನ್ ಲೈನ್ ಮೂಲಕ ಹಣವನ್ನು ಪಡೆದುಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ.