ಉಡುಪಿ: ತುಳುನಾಡು ಟವರ್ಸ್ ಗೆ ಸ್ಥಳಾಂತರಗೊಂಡ “ಅಂಕಿತ ಸ್ಟುಡಿಯೋ” ಉದ್ಘಾಟನೆ
ಉಡುಪಿ: ನಗರದ ಹೆಸರಾಂತ ಫೋಟೋ ಸ್ಟುಡಿಯೋ “ಅಂಕಿತ ಸ್ಟುಡಿಯೋ”ದ ಸ್ಥಳಾಂತರ ಸಮಾರಂಭವು ಭಾನುವಾರ ತುಳುನಾಡು ಟವರ್ಸ್ನಲ್ಲಿ ನಡೆಯಿತು.
ಹತ್ತು ವರ್ಷದಿಂದ ಫೋಟೋಗ್ರಾಫಿ, ವಿಡಿಯೋಗ್ರಾಫಿ, ಡ್ರೋನ್ ಕ್ಯಾಮರ ಬಳಸಿ ವಿಭಿನ್ನ ಶೈಲಿಯಾ ಛಾಯಾಗ್ರಾಹಣದಲ್ಲಿ ನೈಪುಣ್ಯತೆ ಹೊಂದಿದ ಸ್ಟುಡಿಯೋವನ್ನು ಹಿರಿಯ ಛಾಯಾಗ್ರಾಹಕ ನವೀನ್ ಚಂದ್ರ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, ಗ್ರಾಹಕರ ಅಭಿರುಚಿಗೆ ತಕ್ಕಂತೆ ನೂತನ ತಂತ್ರಜ್ಞಾನ ಬಳಸಿಕೊಂಡು ಸೇವೆ ನೀಡಿದರೆ ಜನರ ಸಹಕಾರ ಯಾವತ್ತೂ ಇರುತ್ತದೆ ಎಂದರು.
ಇದೆ ರೀತಿ ಹೊಸತನದೊಂದಿಗೆ ಗ್ರಾಹಕರಿಗೆ ಸೇವೆ ನೀಡಿದರೆ ಸಂಸ್ಥೆ ಬೆಳೆಯುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ವಿಟ್ಠಲ್ ಅಂಚನ್ ಉದ್ಯಾವರ, ಸದಾಶಿವ ಕೋಟ್ಯಾನ್ ಉದ್ಯಾವರ, ಎಸ್ ಕೆಪಿಎ ದ.ಕ. ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ವಲಯಾಧ್ಯಕ್ಷ ಪ್ರಕಾಶ್ ಸೇರಿಗಾರ್, ಸ್ಟುಡಿಯೋ ಮಾಲಕ ಧನಂಜಯ್ ಕಿದಿಯೂರು, ಪತ್ನಿ ಮಧುಮಿತ ಧನಂಜಯ್, ಆರೋಹಿ, ಆರವ್ ಉಪಸ್ಥಿತರಿದ್ದರು.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ಫೋಟೋಗ್ರಾಫಿ, ವಿಡಿಯೋಗ್ರಾಫಿ, ಡ್ರೋನ್, ಫೋಟೋ ಲ್ಯಾಮಿನೇಷನ್, ಫೋಟೋ ಫ್ರೇಮ್ಸ್, ಮಗ್ ಪ್ರಿಂಟಿಂಗ್, ಮೊಬೈಲ್ ಕವರ್ ಪ್ರಿಂಟಿಂಗ್ ಹಾಗೂ ಫೋಟೋಗ್ರಾಫಿಗೆ ಸಂಬಂಧಪಟ್ಟ ಎಲ್ಲ ರೀತಿಯ ಸೇವೆ ನೀಡಲಾಗುವುದು.