ಕಾಸರಗೋಡು: 2000 ರೂ. ಮುಖ ಬೆಲೆಯ ನೋಟು ಪತ್ತೆ- ಓರ್ವ ವಶಕ್ಕೆ
ಕಾಸರಗೋಡು, ಮಾ.22 : ಅಂಬಲತ್ತರ ಗುರುಪುರದ ಮನೆಯೊಂದರಿಂದ 2000ರೂ.ಮುಖ ಬೆಲೆಯ 7 ಕೋಟಿ ಮೌಲ್ಯದ ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಓರ್ವ ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಕೇಂದ್ರ ಸರಕಾರ ರದ್ದು ಗೊಳಿಸಿದ ಎರಡು ಸಾವಿರ ಮುಖ ಬೆಲೆಯ ನೋಟು ಗಳು ಲಭಿಸಿವೆ.ಗಲ್ಫ್ ಉದ್ಯೋಗಿ ಯಾಗಿರುವ ಕೆ. ಪಿ ಬಾಬು ರಾಜ್ ರವರ ಮಾಲಕತ್ವದ ಈ ಮನೆಯು ಪಾಣತ್ತೂರಿನ ಅಬ್ದುಲ್ ರಜಾಕ್ ರವರಿಗೆ ಬಾಡಿಗೆಗೆ ನೀಡಲಾಗಿತ್ತು. ಈ ಮನೆಯ ಬಗ್ಗೆ ಪೊಲೀಸರು ಮೂರು ದಿನಗಳಿಂದ ನಿಗಾ ಇರಿಸಿದ್ದರು. ಬುಧವಾರ ಸಂಜೆ ದಾಳಿ ನಡೆಸಿದ ಪೊಲೀಸರು 2 ಕೋಣೆಗಳಲ್ಲಿ ಬಚ್ಚಿಡಲಾಗಿದ್ದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಥರ್ಮೋಕಾಲ್ ಬಾಕ್ಸ್, ಕಾರ್ಡ್ ಬೋರ್ಡ್ ,ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ .