ಹಿರಿಯಡ್ಕ: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ 8.55 ಲಕ್ಷ ರೂ ಆನ್ಲೈನ್ ವಂಚನೆ
ಹಿರಿಯಡ್ಕ, ಮಾ.20: ದುಪ್ಪಟ್ಟು ಹಣ ಮಾಡಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದತ್ತಾತ್ರೇಯ ಎಂಬವರಿಗೆ ದುಷ್ಕರ್ಮಿಗಳು ಆ್ಯಪ್ ಮೂಲಕ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಅಮಿಷ ತೋರಿಸಿದ್ದು ಅದರಂತೆ ದತ್ತಾತ್ರೇಯ ಫೆ.15ರಿಂದ ಮಾ.7ರ ವರೆಗೆ ಆರೋಪಿಗಳು ಸೂಚಿಸಿದ ಖಾತೆಗೆ ಒಟ್ಟು 8.55 ಲಕ್ಷ ರೂ ಪಾವತಿಸಿದ್ದಾರೆ. ಆದರೆ ಆರೋಪಿಗಳು ಇವರು ಪಾವತಿಸಿದ ಹಾಗೂ ಲಾಭದ ಹಣ ಕೊಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.